ಮೀಡಿಯಾ ಮಂದಿಯ ಪ್ರಶ್ನೆಗೆ ಕರಗಿದ ಲಾಡ್!

ಬೆಂಗಳೂರು: ಇವತ್ತು ಬೆಳಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ಹೈವೋಲ್ಟೇಜ್ ಬ್ರೇಕ್‌ಫಾಸ್ಟ್ ಮೀಟಿಂಗ್ ಮುಗಿಸಿ ಹೊರಬಂದ ಸಚಿವ ಸಂತೋಷ್ ಲಾಡ್ ಕಣ್ಣೀರು…

ಕರಾವಳಿಯಾದ್ಯಂತ ಸಡಗರದ ಬಕ್ರೀದ್: ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದತೆಯ ‘ಈದುಲ್ ಅಝ್‌ಹಾ’ ಆಚರಣೆ!

ಮಂಗಳೂರು/ಉಡುಪಿ: ತ್ಯಾಗ ಹಾಗೂ ಬಲಿದಾನದ ದಿವ್ಯ ಸಂಕೇತವಾಗಿರುವ ಪವಿತ್ರ ‘ಈದುಲ್ ಅಝ್‌ಹಾ’ (ಬಕ್ರೀದ್) ಹಬ್ಬವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾದ್ಯಂತ ಇಂದು ಅತ್ಯಂತ ಶ್ರದ್ಧೆ, ಸಡಗರ ಮತ್ತು ಸೌಹಾರ್ದತೆಯಿಂದ ಆಚರಿಸಲಾಯಿತು. ಕರಾವಳಿಯ ನೂರಾರು ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ವಿಶೇಷ ಈದ್ ನಮಾಝ್ ಮತ್ತು ಪ್ರಾರ್ಥನೆ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬದ ವೈಭವ ಮತ್ತು ಗಣ್ಯರ ಭೇಟಿ:
ನಗರದ ಐತಿಹಾಸಿಕ ಬಾವುಟಗುಡ್ಡದ ಈದ್ಗಾ ಮಸ್ಜಿದ್‌ನಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಖುತುಬಾ ಪಾರಾಯಣ ಜರುಗಿತು. ಹಾಗೆಯೇ, ಝೀನತ್ ಬಕ್ಷ್ ಮಸ್ಜಿದ್‌ನ ಖತೀಬ್ ಸೈಯದ್ ಶಂಶುದ್ದೀನ್ ಬಾಸಿತ್ ಬಾ ಅಲವಿ ತಂಙಳ್ ಅಲ್ ಅನ್ಸಾರಿ ಅವರ ನೇತೃತ್ವದಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಈದ್ಗಾಕ್ಕೆ ಭೇಟಿ ನೀಡಿ ಸೌಹಾರ್ದ ಶುಭ ಹಾರೈಸಿದರು.

ಉಳ್ಳಾಲದ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ಮಂಗಳೂರಿನ ಪಂಪ್‌ವೆಲ್, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್, ಕಂಕನಾಡಿ, ಬಂದರ್, ಕುದ್ರೋಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಜುಮಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ, ಮುಸ್ಲಿಂ ಬಾಂಧವರು ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ದಫನ ಭೂಮಿಗೆ (ಕಬರಸ್ತಾನ್) ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಉಡುಪಿ ಮತ್ತು ಹೆನ್ನಾಬೈಲ್‌ನಲ್ಲಿ ಸಾಮೂಹಿಕ ಪ್ರಾರ್ಥನೆ:
ಉಡುಪಿ ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಕಳೆ ಕಟ್ಟಿತ್ತು. ಉಡುಪಿ ನಗರ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಸೇರಿದಂತೆ ವಿವಿಧ ತಾಲೂಕುಗಳ ಮಸೀದಿಗಳಲ್ಲಿ ಹಬ್ಬದ ವಿಶೇಷ ನಮಾಝ್ ನೆರವೇರಿತು. ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ‌್ರಶೀದ್ ನದ್ವಿ ಹಾಗೂ ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ಅವರ ನೇತೃತ್ವದಲ್ಲಿ ನಮಾಝ್ ನಡೆಯಿತು.

ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಪೂರ್ ಭಾಗವಹಿಸಿದ್ದರು. ಕುಂದಾಪುರದಲ್ಲಿ ಬೆಳಗ್ಗೆ ಆಕರ್ಷಕ ‘ಈದ್ ಮೆರವಣಿಗೆ’ ನಡೆದು, ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹೆನ್ನಾಬೈಲ್ ಈದ್ಗಾ ಮಸೀದಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಧರ್ಮಗುರು ಮೌಲಾನಾ ಅಬ್ದುಲ್ ಹಫೀಝ್ ಅವರು ಐತಿಹಾಸಿಕ ಪ್ರವಾದಿ ಇಬ್ರಾಹಿಮ್ ಅವರ ತ್ಯಾಗದ ದೃಷ್ಟಾಂತವನ್ನು ಸ್ಮರಿಸಿದರು.

ಧರ್ಮಗುರುಗಳಿಂದ ಜಾಗೃತಿ ಮತ್ತು ಸೌಹಾರ್ದ ಸಂದೇಶ:
ಈ ಬಾರಿಯ ಈದ್ ಸಂದೇಶದಲ್ಲಿ ಧರ್ಮಗುರುಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜಕ್ಕೆ ಅತ್ಯಂತ ಮಹತ್ವದ ಸಂದೇಶಗಳನ್ನು ನೀಡಿದರು. ಶಾಂತಿ ಮತ್ತು ಸಹಜೀವನ: ಹಬ್ಬದ ಆಚರಣೆಯು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಧರ್ಮೀಯರೊಂದಿಗಿನ ಸಹಜೀವನಕ್ಕೆ ಪೂರಕವಾಗಿರಬೇಕು ಎಂದು ಕರೆ ನೀಡಿದರು. ಪ್ರಸ್ತುತ ಯುವ ಪೀಳಿಗೆ ಮಾದಕ ದ್ರವ್ಯಗಳ (ಡ್ರಗ್ಸ್) ವ್ಯಸನಕ್ಕೆ ಬಲಿಯಾಗದಂತೆ ಪೋಷಕರು ಜಾಗೃತಿ ವಹಿಸಬೇಕು ಎಂದು ಧರ್ಮಗುರುಗಳು ಕಳಕಳಿ ವ್ಯಕ್ತಪಡಿಸಿದರು.

ಸಂಚಾರ ನಿಯಮಗಳ ಪಾಲನೆ:
ಹೆಲ್ಮೆಟ್ ಹಾಗೂ ಚಾಲನಾ ಪರವಾನಗಿ (ಲೈಸನ್ಸ್) ಇಲ್ಲದೆ ಅತಿವೇಗವಾಗಿ ದ್ವಿಚಕ್ರ ಮತ್ತು ಕಾರು ಚಲಾಯಿಸುವ ಮಕ್ಕಳ ಮೇಲೆ ಪೋಷಕರು ವಿಶೇಷ ನಿಗಾ ಇಡಬೇಕು ಹಾಗೂ ಅಪಘಾತಗಳನ್ನು ತಪ್ಪಿಸಬೇಕು ಎಂದು ಉಡುಪಿ ಬ್ರಹ್ಮಗಿರಿಯ ಹಾಶಿಮಿ ಮಸೀದಿಯ ಇಮಾಮ್ ಮೌಲಾನಾ ಒಬೈದುರ್ ರಹ್ಮಾನ್ ನದ್ವಿ ಎಚ್ಚರಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್:
ಹಬ್ಬದ ದಿನದಂದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮುಂಜಾಗ್ರತಾ ಕ್ರಮವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಿರಿಯರು-ಕಿರಿಯರು ಎನ್ನದೆ ಎಲ್ಲರೂ ಹೊಸ ಬಟ್ಟೆ ಧರಿಸಿ, ಪರಸ್ಪರ ಆಲಿಂಗಿಸಿ ಈದ್ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸೌಹಾರ್ದತೆಯ ಹಬ್ಬಕ್ಕೆ ಸಾಕ್ಷಿಯಾದರು.

 

ಇಳಿಯಲೊಲ್ಲದ ರಾಜನಿಗೆ ಕೊನೆಗೂ ಬಿತ್ತು ಗೇಟ್ ಪಾಸ್! ಲೇಟ್‌ ಆದ್ರೂ ಲೇಟೆಸ್ಟ್‌ ಆಗಿ ಬಂದ ಟ್ರಬಲ್ ಶೂಟರ್

ಹೈಕಮಾಂಡ್‌ಗಳ ಲೆಕ್ಕಾಚಾರ, ಕಾವೇರಿ ನಿವಾಸದ ಒಳಗೆ ನಡೆಯುತ್ತಿದ್ದ ಸದ್ದಿಲ್ಲದ ಕುತಂತ್ರಗಳು ಮತ್ತು ಇಷ್ಟು ದಿನ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತಿದ್ದ ಸಿದ್ದರಾಮಯ್ಯನವರ…

ಯಕ್ಷಗಾನ ಕಲಾವಿದನ ತಾಯಿಯನ್ನು ನಿಂದಿಸಿದ ಪ್ರಕರಣ: ತಿಮರೋಡಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು

ಬೆಂಗಳೂರು: ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್…

ಬೈಕ್ ಕಳ್ಳತನ ಪ್ರಕರಣ: ಕಳವಾಗಿದ್ದ ಬೈಕ್ ಸಹಿತ ಇಬ್ಬರು ಕಳ್ಳರು ವಶಕ್ಕೆ

ಮಂಗಳೂರು: ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಕಳವಾದ ಬೈಕ್‌ ಹಾಗೂ 2 ಮೊಬೈಲ್ ಫೋನ್‌ಗಳನ್ನು…

ಜೆ. ಕೊರಗಪ್ಪ ಅವರಿಗೆ ಸೇವಾ ತ್ರಿವಿಕ್ರಮ ಬಿರುದು ಪ್ರದಾನ

ಮಂಗಳೂರು : ರಿಯಲ್‌ ಎಸ್ಟೇಟ್‌ ಸಂಸ್ಥೆ ಲ್ಯಾಂಡ್ ಲಿಂಕ್ಸ್ ರೂವಾರಿ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಮುಂದಾಳತ್ವದಲ್ಲಿ ಮೇರಿಹಿಲ್‌ನಲ್ಲಿ…

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ 3 ಸ್ಥಾನಗಳಲ್ಲಿ 1 ಸ್ಥಾನ ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲು, ನವೀನ್ ಡಿಸೋಜಾ ಹೆಸರು ಮುಂಚೂಣಿಯಲ್ಲಿ?

ಬೆಂಗಳೂರು: ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದ್ದು, ಈ ಪೈಕಿ ಒಂದು ಸ್ಥಾನ ಮತ್ತೊಮ್ಮೆ ಕಾಂಗ್ರೆಸ್‌ನ ಅಧ್ಯಕ್ಷರಾದ…

ಎಂ.ಸಿ.ಸಿ. ಬ್ಯಾಂಕಿಗೆ ಇಥಿಯೋಪಿಯಾದ ಡ್ಯಾಶೆನ್ ಬ್ಯಾಂಕ್ ಎಸ್.ಸಿ. ಇದರ ಆಡಳಿತ ಮಂಡಳಿಯ ನಿರ್ದೇಶಕರ ಭೇಟಿ

ಮಂಗಳೂರು: ಪೂರ್ವ ಆಫ್ರಿಕಾದ ಇಥಿಯೋಪಿಯಾದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ ಆಡಳಿತ ಮಂಡಳಿಯ ಸದಸ್ಯರು 22 ಮೇ…

ಲಾಲ್‌ಬಾಗ್ ಮೈದಾನದಲ್ಲಿ ಐಪಿಎಲ್ ಫೈನಲ್ ಜಂಗಿ ಕುಸ್ತಿ, ಬಿಗ್ ಸ್ಕ್ರೀನ್‌ನಲ್ಲಿ ಉಚಿತ ವೀಕ್ಷಣೆ!

ಮಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದ ಅನುಭವವನ್ನು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬಿಸಿಸಿಐ ವತಿಯಿಂದ ʻಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ (TATA IPL…

ಮಂಗಳೂರಿನಲ್ಲಿ ಜೂನ್ 4 ರಿಂದ ರಾಷ್ಟ್ರೀಯ ʻಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026′ ಬ್ರಿಡ್ಜ್ ಪಂದ್ಯಾವಳಿ

ಮಂಗಳೂರು: ಕಾರಾವಳಿ ಬ್ರಿಡ್ಜ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯನ್ನು…

error: Content is protected !!