ಇಳಿಯಲೊಲ್ಲದ ರಾಜನಿಗೆ ಕೊನೆಗೂ ಬಿತ್ತು ಗೇಟ್ ಪಾಸ್! ಲೇಟ್‌ ಆದ್ರೂ ಲೇಟೆಸ್ಟ್‌ ಆಗಿ ಬಂದ ಟ್ರಬಲ್ ಶೂಟರ್

ಹೈಕಮಾಂಡ್‌ಗಳ ಲೆಕ್ಕಾಚಾರ, ಕಾವೇರಿ ನಿವಾಸದ ಒಳಗೆ ನಡೆಯುತ್ತಿದ್ದ ಸದ್ದಿಲ್ಲದ ಕುತಂತ್ರಗಳು ಮತ್ತು ಇಷ್ಟು ದಿನ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತಿದ್ದ ಸಿದ್ದರಾಮಯ್ಯನವರ ಹಠಮಾರಿತನಕ್ಕೆ ಕೊನೆಗೂ ಕಾಲವೇ ಒಂದು ಖಡಕ್ ಶಾಖ್ ಕೊಟ್ಟಿದೆ! ಇವತ್ತು ಮಧ್ಯಾಹ್ನ ಮೂರು ಗಂಟೆಗೆ ಸಿದ್ದರಾಮಯ್ಯ ರಾಜಭವನದ ಮೆಟ್ಟಿಲು ಹತ್ತಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕೈಗಿಡುತ್ತಿದ್ದಂತೆ ಡಿಕೆಶಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಅಲ್ಲಿಗೆ ಸಿದ್ದರಾಮಯ್ಯನ ರಾಜಕೀಯ ಜೀವನ ಯುಗಾಂತ್ಯಗೊಂಡಿದೆ.

ನಿಜ ಹೇಳಬೇಕೆಂದರೆ, ಸಿದ್ದರಾಮಯ್ಯನವರು ಇವತ್ತೇ ಇಳಿಯುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಹೈಕಮಾಂಡ್‌ಗೆ ಬೇರೆ ದಾರಿಯೇ ಇರಲಿಲ್ಲ. ಯಾಕಂದ್ರೆ ಎದುರಿಗಿದ್ದದ್ದು ಕನಕಪುರ ಬಂಡೆ ಡಿ.ಕೆ. ಶಿವಕುಮಾರ್! 2023ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಇಡೀ ರಾಜ್ಯ ಸುತ್ತಿ, ರಕ್ತ ಸುರಿಸಿ, ಕಾಂಗ್ರೆಸ್‌ಗೆ 135 ಸೀಟು ತಂದುಕೊಟ್ಟಾಗ ಇದೇ ಸಿದ್ದರಾಮಯ್ಯನವರು ಹೈಕಮಾಂಡ್ ಕಾಲು ಹಿಡಿದು ಮೊದಲ ಅವಧಿಗೆ ಸಿಎಂ ಕುರ್ಚಿ ಗಿಟ್ಟಿಸಿಕೊಂಡಿದ್ದರು. ಅಂದು ಕೊಟ್ಟಿದ್ದ ರೊಟೇಷನಲ್ ಸಿಎಂ ಒಪ್ಪಂದದ ರಹಸ್ಯ ಕಾಗದವನ್ನು ಇಷ್ಟು ದಿನ ಸಿದ್ದರಾಮಯ್ಯ ಮತ್ತು ಅವರ ಚೇಲಾಗಳು ಕಸದ ಬುಟ್ಟಿಗೆ ಹಾಕಲು ನೋಡುತ್ತಿದ್ದರು. ಆದರೆ, ಡಿ.ಕೆ. ಶಿವಕುಮಾರ್ ತಣ್ಣಗೆ ಕಾಯುತ್ತಿದ್ದರು. ಸಿಂಹ ಎರಡು ಹೆಜ್ಜೆ ಹಿಂದೆ ಇಟ್ಟರೆ ಅದು ಹೆದರಿದೆ ಎಂದರ್ಥವಲ್ಲ, ಬೇಟೆಯಾಡಲು ಸಮಯ ನೋಡುತ್ತಿದೆ ಎಂದರ್ಥ!

ಇವತ್ತು ಬೆಳಿಗ್ಗೆ ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಏರ್ಪಡಿಸಿದ್ದ ಆ ಬ್ರೇಕ್‌ಫಾಸ್ಟ್ ಮೀಟಿಂಗ್ ನಿಜಕ್ಕೂ ನಾಟಕದ ಪರಮಾವಧಿಯಾಗಿತ್ತು. ಅಲ್ಲಿ ಹಂಚಿಕೆಯಾದ ಫೋಟೋಗಳನ್ನು ನೋಡಿದ್ರೆ ನಿಮಗೇ ಅರ್ಥವಾಗುತ್ತದೆ. ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯನವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದಾರೆ.

ಅದು ಕೇವಲ ಆಶೀರ್ವಾದ ಅಲ್ಲ ಮಾರಾಯ್ರೇ, ಅದೊಂದು ಕ್ಲಾಸಿಕ್ ಸೈಲೆಂಟ್ ವಾರ್ನಿಂಗ್! “ಇಷ್ಟು ದಿನ ನೀವು ಕೊಟ್ಟ ತೊಂದರೆ ಸಾಕು ಸರ್, ಈಗ ಹೈಕಮಾಂಡ್ ಆರ್ಡರ್ ಮಾಡಿದೆ, ಇನ್ಮೇಲಾದರೂ ನನಗೆ ಕಿರಿಕ್ ಕೊಡದೆ ಸುಸೂತ್ರವಾಗಿ ಆಡಳಿತ ನಡೆಸಲು ದಾರಿ ಬಿಡಿ” ಎಂದು ಡಿಕೆಶಿ ತಮ್ಮದೇ ಶೈಲಿಯಲ್ಲಿ ಸಿದ್ದರಾಮಯ್ಯನವರಿಗೆ ಅರ್ಥ ಮಾಡಿಸಿದ್ದಾರೆ. ಸಿದ್ದರಾಮಯ್ಯ ಕೂಡ ವಿಧಿಯಿಲ್ಲದೆ ಶಿವಕುಮಾರ್ ಅವರನ್ನು ಗಟ್ಟಿಯಾಗಿ ಆಲಂಗಿಸಿಕೊಂಡಿದ್ದಾರೆ. ಆ ಆಲಂಗನದ ಹಿಂದೆ ಸೋಲಿನ ನಿರಾಸೆ ಎದ್ದು ಕಾಣುತ್ತಿತ್ತು.

ಪಕ್ಷವನ್ನು ಸತತವಾಗಿ ಉಳಿಸಿಕೊಂಡು ಬಂದ, ದಿಲ್ಲಿ ನಾಯಕರ ಕಣ್ಮಣಿಯಾಗಿರುವ ಟ್ರಬಲ್ ಶೂಟರ್ ಡಿಕೆಶಿಗೆ ಇವತ್ತು ಸಿಎಂ ಪಟ್ಟ ಸಿಗುತ್ತಿದೆ. ಸಿದ್ದರಾಮಯ್ಯನವರನ್ನು ದಿಲ್ಲಿಗೆ ಶಿಫ್ಟ್ ಮಾಡಲು ಹೈಕಮಾಂಡ್ ಸಿಡಬ್ಲ್ಯೂಸಿ ಸೀಟು ರೆಡಿ ಮಾಡಿಟ್ಟಿದೆಯಂತೆ. ಆದರೆ ಸಿದ್ದರಾಮಯ್ಯನವರಿಗೆ ದಿಲ್ಲಿ ರಾಜಕಾರಣದ ಹೆಸರೆತ್ತಿದ್ರೇನೇ ಅಲರ್ಜಿ. ಅವರ ಕಥೆ ಹಾಗಿರಲಿ, ಇನ್ಮುಂದೆ ಕರ್ನಾಟಕದಲ್ಲಿ ಟ್ರಬಲ್ ಶೂಟರ್ ಡಿಕೆಶಿ ಯುಗ ಆರಂಭವಾಗಲಿದೆ. ರಾಜಕೀಯದ ಚದುರಂಗದಾಟದಲ್ಲಿ ಯಾರು ಯಾರಿಗೆ ಯಾವಾಗ ಸ್ಲಿಪ್ಪರ್ ಶಾಟ್ ಕೊಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಇಂದಿನ ಕಾವೇರಿ ನಿವಾಸದ ಹೈಡ್ರಾಮಾವೇ ಸಾಕ್ಷಿ!

ಅನಿ ವೇ ಆಲ್‌ ದಿ ಬೆಸ್ಟ್‌ ಡಿಕೆಶಿ
-ಗಿರಿ

error: Content is protected !!