
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಕಳವಾದ ಬೈಕ್ ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡ ಘಟನೆ ಮುಲ್ಕಿ ಪೊಲೀಸರಿಂದ ನಡೆದಿದೆ.

ಸುರತ್ಕಲ್ ನಿವಾಸಿ ಮೊಹಮ್ಮದ್ ರಾಝಿಕ್(36) ಹಾಗೂ ಬೈಕಂಪಾಡಿ ನಿವಾಸಿ ಉಬೈದತ್ ಹೈದರ್(31) ಬಂಧಿತರು.

ಮೇ 8ರ ಸೋಮವಾರ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ಜಂಕ್ಷನ್ ಬಳಿ ಅಪೋಲೊ ಫಾರ್ಮ್ ಬಳಿ ನಿಲ್ಲಿಸಿದ ಹೋಂಡಾ ಯುನಿಕಾರ್ನ್ ಬೈಕ್ ಅನ್ನು ಕಳ್ಳತನ ಮಾಡಿದ್ದರು. ಸುಮಾರು 20 ಸಾವಿರ ರೂ. ಮೌಲ್ಯದ ಕಳುವಾದ ಬೈಕ್ ಹಾಗೂ ಸುಮಾರು 18 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಕ್ರೈಂ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.