ಗಣಪತಿ ವಿಸರ್ಜನೆ ವೇಳೆ 10 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾ*ವು !

ಹೊಳೆಹೊನ್ನೂರು: ಗಣಪತಿ ವಿಸರ್ಜನೆ ಮಾಡುವ ವೇಳೆ 10 ವರ್ಷದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುರುಬರ ವಿಠಲಾಪುರದಲ್ಲಿ ಸೋಮವಾರ(ಸೆ.1) ನಡೆದಿದೆ.

ಇಟ್ಟಿಗೆಹಳ್ಳಿಯ ಕುಶಾಲ್ (10) ಮೃತ ಬಾಲಕ.

ಕುರುಬರ ವಿಠಲಾಪುರದ ಬೀದಿಯ ಪುಟಾಣಿ ಮಕ್ಕಳು ಮಣ್ಣು ಬಳಸಿ ತಾವೇ ಸ್ವತಃ ಗಣಪನ ಮೂರ್ತಿ ತಯಾರಿಸಿ ಪೂಜೆ ಸಲ್ಲಿಸಿದ್ದರು. ಸೋಮವಾರ ಸಂಜೆ ವೇಳೆಗೆ ಗಣಪನನ್ನು ಭದ್ರಾ ನಾಲೆಗೆ ವಿಸರ್ಜನೆ ಮಾಡುವಾಗ ಈ ಅವಘಡ ನಡೆದಿದೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಪಾಲಕರಿಗೆ ತಿಳಿಸದೆ 3 ಮಕ್ಕಳು ನಾಲೆಗೆ ತೆರಳಿದ್ದು, ನಾಲೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದ ವೇಳೆ ಆಯಾತಪ್ಪಿದ ಕುಶಾಲ್ ನಾಲೆಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ.

ಸುದ್ದಿ ತಿಳಿದು ಸ್ಥಳೀಯರು ನಾಲೆಯಲ್ಲಿ ಹುಡುಕಾಡಿ ಬಾಲಕನ ಶವವನ್ನು ಹೊರ ತೆಗೆದಿದ್ದಾರೆ‌. ಈ ಘಟನೆ ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

error: Content is protected !!