ಚಿಕ್ಕಬಳ್ಳಾಪುರ: ಮದುವೆಯಾದ ಹದಿನೈದು ದಿನಕ್ಕೆ ಹೆಂಡತಿ ಮನೆಯಲ್ಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರ ಮೂಲದ ಭಾಸ್ಕರ್ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ನೇತ್ರಾಳನ್ನು ವರಿಸಿದ್ದನು. ಬ್ರೋಕರ್ಗಳ ಮೂಲಕ ಹುಡುಗಿಯನ್ನು ಹುಡುಕಿದ್ದು, ಹುಡುಗಿ ನೋಡಿದ ದಿನವೇ ಮದುವೆಯಾಗಿದ್ದನು. ಬಳಿಕ ಚಿಂತಾಮಣಿ ತಾಲ್ಲೂಕಿನ ಗೌನಿಚೆರುವುಪಲ್ಲಿಯಲ್ಲಿರುವ ಭಾಸ್ಕರ್ ಪತಿಯ ಮಾವ ವೆಂಕಟರಮಣರೆಡ್ಡಿ ಮನೆಯಲ್ಲಿದ್ದರು.


ಭಾಸ್ಕರ್ ಅರಿವಿಲ್ಲದೆ ಬ್ರೋಕರ್ಗಳ ಮಹಾ ಮೋಸಕ್ಕೆ ಬಲಿಯಾಗಿ ವಿವಾಹಿತ ಮಕ್ಕಳ ತಾಯಿಯನ್ನು ಮದುವೆಯಾಗಿದ್ದ, ಮದನಪಲ್ಲಿಗೆ ಹೋಗಿ ಬರುವಷ್ಟರಲ್ಲಿ ಹೆಂಡತಿ ನೇತ್ರಾ ಎಸ್ಕೇಪ್ ಆಗಿದ್ದಾಳೆ.

ಸದ್ಯ, ಘಟನೆ ಸಂಬಂಧ ಗಂಡ ಭಾಸ್ಕರ್ ರೆಡ್ಡಿ, ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದಾರೆ.