ಸೆ.27ರಂದು ನಡುಪದವಿನಲ್ಲಿ ‘ಕನ್‌ವರ್ಜೆನ್ಸ್ 2025’ ಕೃತಕ ಬುದ್ಧಿಮತ್ತೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ !

ಮಂಗಳೂರು: ನಡುಪದವಿನ ಪಿ.ಎ. ಫಸ್ಟ್ ಗ್ರೇಡ್ ಕಾಲೇಜು ಹಾಗೂ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್, ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಮತ್ತು ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)ಗಳ ಸಹಯೋಗದಲ್ಲಿ “ಕನ್‌ವರ್ಜೆನ್ಸ್ 2025 – ಸುಸ್ಥಿರ ಭವಿಷ್ಯದ ಕೃತಕ ಬುದ್ಧಿಮತ್ತೆ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಸೆಪ್ಟೆಂಬರ್ 27ರಂದು ನಡುಪದವಿನ ಪಿ.ಎ. ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಈ ಬಗ್ಪ್ರಾಂಗೆ ಶುಪಾಲ ಡಾ. ಸಫ್ರ್ರಾಜ್ ಜೆ. ಹಾಸಿಂ ಮಂಗಳೂರಿ ಪ್ರಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಈ ಸಮ್ಮೇಳನವು ಕೃತಕ ಬುದ್ಧಿಮತ್ತೆಯ ನವೀನ ಆವಿಷ್ಕಾರಗಳನ್ನು ಹಂಚಿಕೊಳ್ಳುವ ಜೊತೆಗೆ ಯುಎನ್ ಸುಸ್ಥಿರಾಭಿವೃದ್ಧಿ ಗುರಿಗಳ ಸಾಧನೆಗೆ ಮಾರ್ಗದರ್ಶನ ನೀಡಲಿದೆ. ಸಂಶೋಧಕರು, ಉದ್ಯಮ ತಜ್ಞರು ಹಾಗೂ ವಿದ್ಯಾರ್ಥಿಗಳಿಗೆ ಇದು ಮಹತ್ವದ ವೇದಿಕೆಯಾಗಿದೆ” ಎಂದು ಹೇಳಿದರು.

ಬಹ್ರೈನ್‌ನ ಕಿಂಗ್‌ಡಮ್ ಯೂನಿವರ್ಸಿಟಿ ಪ್ರೊ. ಇಸ್ಮಾಯಿಲ್ ತೋನ್ಸೆ ಹವಾಲ್ದಾರ್ ಹಾಗೂ ಯುಎಇಯ ವೆನ್ಸ್ಫೋರ್ಡ್ ಎಚ್.ಇ. ಅಸೋಸಿಯೇಟ್ ಡೀನ್ ಡಾ. ಸೂಫಿ ಅನ್ಸರ್ ಪ್ರಮುಖ ಭಾಷಣ ಮಾಡಲಿದ್ದಾರೆ.

ಚರ್ಚೆಯಾಗುವ ಪ್ರಮುಖ ವಿಷಯಗಳು

  • ಮಾನವ ಸಂಪನ್ಮೂಲ ನಿರ್ವಹಣೆ

  • ಮಾರ್ಕೆಟಿಂಗ್ ಮತ್ತು ಗ್ರಾಹಕರ ವರ್ತನೆ

  • ಹಣಕಾಸು ಮತ್ತು ಫಿನ್‌ಟೆಕ್

  • ಆಹಾರ ಪೋಷಣೆ ಹಾಗೂ ಸಾರ್ವಜನಿಕ ಆರೋಗ್ಯ

  • ಕಂಪ್ಯೂಟರ್ ಅಪ್ಲಿಕೇಶನ್‌ಗಳು ಮತ್ತು ಹೊಸ ತಂತ್ರಜ್ಞಾನಗಳು

ಸಾರಾಂಶ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 8 ಮತ್ತು ಸಂಪೂರ್ಣ ಲೇಖನ ಸಲ್ಲಿಕೆ ಸೆಪ್ಟೆಂಬರ್ 15 ಆಗಿದ್ದು, ಆಸಕ್ತರು ತಮ್ಮ ಪ್ರಬಂಧಗಳನ್ನು convergence@pace.edu.in ಗೆ ಕಳುಹಿಸಬಹುದು ಎಂದು  ಡಾ. ಸಫ್ರ್ರಾಜ್ ಜೆ. ಹಾಸಿಂ ತಿಳಿಸಿದ್ದಾರೆ.

📞 ಮಾಹಿತಿಗಾಗಿ –

  • ಮಹಮ್ಮದ್ ಆರೀಫ್, ಸಹಾಯಕ ಪ್ರಾಧ್ಯಾಪಕರು, ಪಿ.ಎ. ಫಸ್ಟ್ ಗ್ರೇಡ್ ಕಾಲೇಜು – 9844635432

  • ಡಾ. ರೋಶನ್ ಎಫ್. ಡಿಸೋಜಾ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) – 9591050256

ಪತ್ರಿಕಾಗೋಷ್ಠಿಯಲ್ಲಿ ಡಾ. ಸಯ್ಯದ್ ಅಮೀನ್ ಅಹಮ್ಮದ್, ವಾಣಿಶ್ರೀ, ಮೊಹಮ್ಮದ್ ಆಸಿಫ್ ಉಪಸ್ಥಿತರಿದ್ದರು.

error: Content is protected !!