ಮಂಗಳೂರು: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಕುಸುಮಾವತಿ ಮಗಳು ಸೌಜನ್ಯ ಪ್ರಕರಣದ ಕುರಿತಂತೆ ಚಿನ್ನಯ್ಯ ಹೇಳಿಕೆ ಆಧಾರದಲ್ಲಿ ತನಿಖೆ ನಡೆಸುವಂತೆ ಎಸ್‌ಟಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಉದಯ್ ಕುಮಾರ್ ವಿಚಾರಣೆಗೆ ಕರೆದಿದ್ದಾರೆ. ಅದೇ ರೀತಿ ಧೀರಜ್ ಕೆಲ್ಲಾ ಹಾಗೂ ಮಲ್ಲಿಕ್ ಜೈನ್‌ನನ್ನೂ ಎಸ್‌ಐಟಿ ವಿಚಾರಣೆಗೆ ಕರೆದಿದೆ ಎಂದು ತಿಳಿದುಬಂದಿದೆ.
ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯ್ ಕುಮಾರ್ ಜೈನ್, ನನನ್ನು ನಿನ್ನೆ ಸಂಪತ್ ಕುಮಾರ್ ಹೆಸರಿನ ಪೊಲೀಸ್ ನನ್ನನ್ನು ಬರ್ಲಿಕ್ಕೆ ಹೇಳಿದ್ದರು, ಆದರೆ ನಿನ್ನೆ ನನಗೆ ಹೋಗ್ಲಿಕ್ಕೆ ಆಗಿರಲಿಲ್ಲ. ಹೀಗಾಗಿ ಇಂದು 11 ಗಂಟೆಗೆ ಬರಲು ಹೇಳಿದ್ದು, ನಾನು 10 ಗಂಟೆಗೆ ಹೋಗಿ ಬಂದಿದ್ದೇನೆ. ಆದರೆ ಯಾವ ಕೇಸ್ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿಲ್ಲ, ಬುರುಡೆ ಪ್ರಕರಣವೂ ಆಗಿರಬಹುದು ಅಥವಾ ಸೌಜನ್ಯ ಪ್ರಕರಣವೂ ಆಗಿರಬಹುದು ಎಂದು ಉದಯ್ ಹೇಳಿದರು.
ಸೌಜನ್ಯ ಕೇಸಿಗೆ ಸಂಬಂಧಿಸಿ ಮಾಮೂಲಿ ಪೊಲೀಸರು, ಸಿಐಡಿ, ಸಿಬಿಐ ವಿಚಾರಣೆ ಆಗಿದೆ. ಸೌಜನ್ಯ ಘಟನೆ ಆದ ಒಂದು ವರ್ಷನಂತರ ನಮ್ಮ ಮೇಲೆ ಪ್ಲ್ಯಾನ್ ಮಾಡಿ ಆರೋಪ ಹಾಕಿದ್ದಾರೆ. ಅಂದು ನಾನು ಇದರ ಬಗ್ಗೆ ಸೌಜನ್ಯ ಮಾವನ ಹೊಟೆಲ್‌ಗೆ ಹೋಗಿ ಕೇಳಿದಾಗ, ಅವರು ನೋಡಿ ಉದಯಣ್ಣ ನಿಮ್ಮ ಹೆಸರನ್ನು ತೆಗೆಯಲು ಸಿಐಡಿಗೆ ಹೇಳ್ತೇನೆ. ಹೆಗ್ಡೆಯ ತಮ್ಮನ ಮಗನ ಹೆಸರು ಹೇಳಬೇಕು ಎಂದು ಹೇಳಿದ್ದ. ಅದನ್ನು ನಾನು ನನ್ನ ಸಣ್ಣ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಅಂದಿನ ಎಸ್‌ಪಿ ಗೌರಿಯವರಿಗೆ ಕೊಟ್ಟಿದ್ದೆ ಎಂದು ಹೇಳಿದರು.
ಗವರ್ಮೆಂಟ್ ವಕೀಲರಿಗೆ ರೂ. 1.5 ಕೋಟಿ ಕರ್ಚಿ ಆಗಿದೆ ಅಂತ ವಿಠಲ ಗೌಡ , ತಿಮರೋಡಿ ಹೇಳಿದ್ದಾರೆ. ನಮ್ಮ ಬ್ರೈನ್ ಮ್ಯಾಪಿಂಗ್ ಮಾಡಿಸಿ, ಪ್ರಕರಣದಲ್ಲಿ ನಮ್ಮ ಶಾಮೀಲಾತಿ ಇಲ್ಲ ಎಂದು ಕೈ ಬಿಟ್ಟರೂ ಸೌಜನ್ಯ ತಂದೆ ನಮ್ಮ ಮೇಲೆ ಮತ್ತೆ ಆರೋಪ ಮಾಡಿದ್ದರು ಎಂದು ಉದಯ್ ಕುಮಾರ್ ಜೈನ್ ಮಾಧ್ಯಮಗಳ ಮುಂದೆ ಹೇಳಿದರು.