ಕಾಂತಾರದಲ್ಲಿ ನಟಿಸಿದ್ದ ಮತ್ತೊಬ್ಬ ಹೆಸರಾಂತ ಕಲಾವಿದ ಕುಸಿದು ಬಿದ್ದು ಸಾವು!

ಉಡುಪಿ: ಕಾಂತಾರ ಚಿತ್ರದಲ್ಲಿ ನಟಿಸಿ ಮನೆಮಾತಾಗಿದ್ದ ಹೆಸರಾಂತ ಕಲಾವಿದ ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ 8.30ರ ಸುಮಾರಿಗೆ ಹಿರಿಯಡ್ಕದಲ್ಲಿ ಸಂಭವಿಸಿದೆ. ಕಾಂತಾರ ಮೊದಲ ಚಿತ್ರದಲ್ಲಿ ನ್ಯಾಯವಾದಿ ಪಾತ್ರದಲ್ಲಿ ಕಾಣಿಸಿಕೊಂಡ ಪೆರ್ಡೂರು ಮೂಲದ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಅಧಿಕಾರಿ ಟಿ. ಪ್ರಭಾಕರ್ ಕಲ್ಯಾಣಿ ಮೃತಪಟ್ಟ ದುರ್ದೈವಿ.

ಈ ಚಿತ್ರದಲ್ಲಿ ನಟಿಸಿದ್ದ ಮೂರು ಕಲಾವಿದರು ಈ ಮುಂಚೆ ನಾನಾ ಕಾರಣಗಳಿಂದ ನಟಿಸಿದ್ದರು. ಇದೀಗ ಟಿ. ಪ್ರಭಾಕರ್ ಕಲ್ಯಾಣಿ ಅಸುನೀಗಿದ್ದು, ಆತಂಕಕ್ಕೆ ಕಾರಣವಾಗಿದೆ. ಕಾಂತಾರ ಚಾಪ್ಟರ್‌ 1 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ತೆರೆ ಕಾಣುವ ಮುನ್ನವೇ ಕಲಾವಿದ ಮೃತಪಟ್ಟಿದ್ದು, ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಕಾಂತಾರ ಚಿತ್ರ ತಂಡದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿ : ಇದು ಮೂರನೇ ಸಾವು

ಕಳೆದ ಎರಡು ದಿನಗಳ ಹಿಂದೆ ಟಿ. ಪ್ರಭಾಕರ್ ಕಲ್ಯಾಣಿ ಮನೆಯಲ್ಲಿ ಜಾರಿಬಿದ್ದಿದ್ದು, ಅದಕ್ಕೆ ಚಿಕಿತ್ಸೆ ಪಡೆದು ಮನೆಯಲ್ಲಿಯೇ ಇದ್ದರು. ಇಂದು ಇಂದು ಬೆಳಿಗ್ಗೆ 8:30 ಸುಮಾರಿಗೆ ಮನೆಯಲ್ಲಿ ಕೈಕಾಲು ನೋವು ಎಂದು ಪತ್ನಿ ಜೊತೆ ಹೇಳಿಕೊಂಡಿದ್ದರು. ಇನ್ನೇನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬಾರೆಬೈಲು ಪಂಜುರ್ಲಿಯ ಎಚ್ಚರಿಕೆಯ ಬೆನ್ನಲ್ಲೇ ಕಾಂತಾರಕ್ಕೆ ಕಂಟಕದ ಸರಮಾಲೆ

ಅವರು ಕಾಂತಾರ ಚಿತ್ರದ ಪಾತ್ರಕ್ಕಾಗಿ ಸುಮಾರು ಒಂದು ವರ್ಷಗಳಿಂದ ಗಡ್ಡವನ್ನು ತೆಗೆಯದೆ ಉಳಿಸಿಕೊಂಡಿದ್ದರು. ಆದರೆ ಚಿತ್ರತಂಡವು ಅವರಿಗೆ ಈ ಮೊದಲು ನಿರ್ಧರಿಸಿದ ಪಾತ್ರವನ್ನು ನೀಡದೆ ಬೇರೊಂದು ಪಾತ್ರ ನೀಡಿತ್ತು. ಇದರಿಂದ ಅವರು ತೀವ್ರ ನೊಂದುಕೊಂಡಿದ್ದರು ಎಂಬ ಮಾಹಿತಿ ಆಪ್ತವಲಯದಿಂದ ಲಭಿಸಿದೆ. ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

“ಕಾಂತಾರ-2“ ಸಿನಿಮಾಕ್ಕೆ ಮತ್ತೆ ವಿಘ್ನ!! ಕೇರಳ ಮೂಲದ ಆರ್ಟಿಸ್ಟ್ ನೀರುಪಾಲು!

ಮೃತ ಅಂತ್ಯಕ್ರಿಯೆ ಇಂದು ಬೀಡಿನ ಗುಡ್ಡೆಯ ರುದ್ರಭೂಮಿಯಲ್ಲಿ ನಡೆಯಲಿದೆ. ರಂಗ ಕಲಾವಿದರಾಗಿ, ವಿವಿಧ ನಾಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಭಾಕರ್ ಸಾವಿನಿಂದ ರಂಗಭೂಮಿ ಅಪಾರ ನಷ್ಟ ಅನುಭವಿಸಿದೆ.

ಈ ಹಿಂದೆ ಜೂನಿಯರ್‌ ಆರ್ಟಿಸ್ಟ್‌ ಕಪಿಲ್‌,ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್‌ ಪೂಜಾರಿ, ಮಿಮಿಕ್ರಿ ಕಲಾವಿದ ವಿಜು ಸಾವನ್ನಪ್ಪಿದ್ದರು.

ಕಾಂತಾರ -2ಕ್ಕೆ ಭಾರೀ ವಿಘ್ನ: ಬಾರೆಬೈಲ್‌ ವಾರಾಹಿ ಪಂಜುರ್ಲಿ ರಿಷಬ್‌ ಶೆಟ್ಟಿಗೆ ನೀಡಿದ ಭಯಾನಕ ಎಚ್ಚರಿಕೆ ಏನು?

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!