ನವದೆಹಲಿ: ಜನಪ್ರಿಯ ದೂರದರ್ಶನ ನಟಿ ಗೌತಮಿ ಕಪೂರ್ ತನ್ನ ಮಗಳು ಸಿಯಾಗೆ ಆಕೆಯ 16 ನೇ ಹುಟ್ಟುಹಬ್ಬದಂದು ಸೆಕ್ಸ್ ಟಾಯ್ ಉಡುಗೊರೆಯಾಗಿ ನೀಡಲು ಬಯಸಿದ್ದಾಗಿ ಇತ್ತೀಚೆಗೆ ಬಹಿರಂಗಪಡಿಸಿದ್ದು, ಅದರ ಸಂದರ್ಶನ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡು ಸಂಚಲನ ಸೃಷ್ಟಿಸುತ್ತಿದೆ.
ಮೇ ತಿಂಗಳಲ್ಲಿ, ಗೌತಮಿ ಕಪೂರ್ ತನ್ನ ಮಗಳಿಗೆ ತನ್ನ 16 ನೇ ಹುಟ್ಟುಹಬ್ಬದಂದು ಲೈಂಗಿಕ ಆಟಿಕೆಯನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾಗಿ ಹೌಟರ್‌ಫ್ಲೈಗೆ ತಿಳಿಸಿದರು. ಭಾರತೀಯ ಪೋಷಕರು ತಮ್ಮ ಹದಿಹರೆಯದ ಮಕ್ಕಳೊಂದಿಗೆ ಲೈಂಗಿಕತೆಯ ಬಗ್ಗೆ ಸಂಭಾಷಣೆಯನ್ನು ಪ್ರಾರಂಭಿಸಲು ಇನ್ನೂ ಎರಡು ಬಾರಿ ಯೋಚಿಸುತ್ತಿರುವಾಗ ಗೌತಮಿಯ ಈ ನಡೆಯನ್ನು ಕೆಲವು ನೆಟ್ಟಿಗರು ಶ್ಲಾಘಿಸಿದ್ದಾರೆ.
“ನನ್ನ ಮಗಳಿಗೆ 16 ವರ್ಷ ತುಂಬಿದಾಗ, ನಾನು ಅವಳಿಗೆ ಲೈಂಗಿಕ ಆಟಿಕೆ ಅಥವಾ ವೈಬ್ರೇಟರ್ ಅನ್ನು ಉಡುಗೊರೆಯಾಗಿ ನೀಡುವ ಬಗ್ಗೆ ಯೋಚಿಸುತ್ತಿದ್ದೆ. ನಾನು ಅವಳೊಂದಿಗೆ ಚರ್ಚಿಸುತ್ತಿದ್ದಾ, ಅವಳು ʻಅಮ್ಮಾ, ನೀವು ಕೂಡಾ ಅದನ್ನು ಮಾಡುತ್ತೀರಾ ಎಂದು ಪ್ರಶ್ನಿಸುತ್ತಿದ್ದಳು. ಎಷ್ಟೋ ತಾಯಂದಿರು ನನ್ನಲ್ಲಿ ತಮ್ಮ ಹೆಣ್ಣುಮಕ್ಕಳಿಗೆ ಅಂತಹ ಉಡುಗೊರೆಗಳನ್ನು ಏಕೆ ನೀಡಬಾರದು ಎಂದು ಕೇಳುತ್ತಿದ್ದರು. ನೀವು ಕೂಡಾ ಈ ಬಗ್ಗೆ ಯೋಚಿಸಿ ಎಂದು ಹೇಳುತ್ತಿದ್ದೆ. ನಾವ್ಯಾಕೆ ನಮ್ಮ ಹೆಣ್ಮಕ್ಕಳಿಗೆ ಆ ರೀತಿಯ ಪ್ರಯೋಗ ಮಾಡಬಾರದು?” ಗೌತಮಿ ತಿಳಿಸಿದ್ದಾರೆ.
“ನನ್ನ ತಾಯಿ ನನ್ನೊಂದಿಗೆ ಮಾಡದಿದ್ದನ್ನು, ನಾನು ನನ್ನ ಮಗಳೊಂದಿಗೆ ಮಾಡಲು ಬಯಸುತ್ತೇನೆ. ಅವಳು ಎಲ್ಲವನ್ನೂ ಅನುಭವಿಸಬೇಕೆಂದು ನಾನು ಬಯಸುತ್ತೇನೆ. ಬಹಳಷ್ಟು ಮಹಿಳೆಯರು ಜೀವನದ ಸುಖಗಳನ್ನು ಅನುಭವಿಸದೆ ಬದುಕುತ್ತಾರೆ. ಆ ಪರಿಸ್ಥಿತಿಯಲ್ಲಿ ಏಕೆ ಇರಬೇಕು? ಇಂದು, ನನ್ನ ಮಗಳಿಗೆ 19 ವರ್ಷ ಮತ್ತು ನನಗೆ ಆ ಆಲೋಚನೆ ಇದ್ದುದನ್ನು ಅವಳು ಮೆಚ್ಚುತ್ತಾಳೆ ಮತ್ತು ಅದಕ್ಕಾಗಿ ನನ್ನನ್ನು ಗೌರವಿಸುತ್ತಾಳೆ” ಎಂದು ಗೌತಮಿ ಆಗ ಹೇಳಿದರು.
ಗೌತಮಿ ತನ್ನ ಪತಿ ರಾಮ್ ಕಪೂರ್ ಅವರನ್ನು ದೂರದರ್ಶನ ಕಾರ್ಯಕ್ರಮ ಘರ್ ಏಕ್ ಮಂದಿರದ ಸೆಟ್‌ಗಳಲ್ಲಿ ಭೇಟಿಯಾದರು. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ದಂಪತಿ 2003 ರಲ್ಲಿ ವಿವಾಹವಾದರು. ಅವರು ಸಿಯಾ ಮತ್ತು ಅಕ್ಸ್ ಕಪೂರ್ ಎಂಬ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಗೌತಮಿ ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳಲ್ಲಿ ಫ್ಯಾಮ್‌ಜಾಮ್ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.