ಶಾಸಕ ಮಂಜುನಾಥ ಭಂಡಾರಿ ಅರೋಗ್ಯ ವಿಚಾರಿಸಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವ ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರ ಸದಾಶಿವನಗರದ ನಿವಾಸಕ್ಕೆ ಇಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.


ಈ ವೇಳೆ ಭಂಡಾರಿ ಅವರ ಕುಟುಂಬ ಸದಸ್ಯರ ಬಳಿ ಸಮಾಲೋಚನೆ ನಡೆಸಿದ ಅವರು ಜನಸೇವೆಯಲ್ಲಿ ಗುರುತಿಸಿಕೊಂಡಿರುವ ನೀವು ಶೀಘ್ರ ಗುಣಮುಖರಾಗಿ, ಪೂರ್ಣ ಚೇತರಿಕೆಯೊಂದಿಗೆ ಸಾರ್ವಜನಿಕ ಜೀವನಕ್ಕೆ ಮರಳಿಬನ್ನಿ ಎಂದು ಶುಭ ಹಾರೈಸಿ ತೆರಳಿದರು.

error: Content is protected !!