“ಕಾಂತಾರ-2“ ಸಿನಿಮಾಕ್ಕೆ ಮತ್ತೆ ವಿಘ್ನ!! ಕೇರಳ ಮೂಲದ ಆರ್ಟಿಸ್ಟ್ ನೀರುಪಾಲು!

ಮಂಗಳೂರು: ರಿಷಭ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ-2 ಚಿತ್ರಕ್ಕೆ ಮತ್ತೆ ವಿಘ್ನ ಎದುರಾಗಿದೆ. ಸಿನಿಮಾದ ಕೇರಳ ಮೂಲದ ಆರ್ಟಿಸ್ಟ್ ಯುವಕರು ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ನೀರು ಪಾಲಾದ ಘಟನೆ ಇಂದು ಸಂಜೆ ಬೆಳಕಿಗೆ ಬಂದಿದೆ. ಕಪಿಲ್ ಎಂಬಾತ ಸಾವನ್ನಪ್ಪಿದ್ದು ಈತ ಚಿತ್ರೀಕರಣ ಬಿಡುವಿನ ವೇಳೆ ಕೊಲ್ಲೂರು ಬಳಿ ನದಿಯಲ್ಲಿ ಈಜಾಟಕ್ಕೆ ಇಳಿದಾಗ ಘಟನೆ ಸಂಭವಿಸಿದೆ.
ಇತ್ತೀಚಿಗೆ ರಿಷಭ್ ಶೆಟ್ಟಿ ತಮಗೆ ಚಿತ್ರೀಕರಣ ಸಂದರ್ಭ ಅಡಚಣೆ ಉಂಟಾಗುತ್ತಿದೆ ಎಂದು ಮಂಗಳೂರಿನಲ್ಲಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೈವವು ರಿಷಭ್ ಶೆಟ್ಟಿ ಕುಟುಂಬದ ಮೇಲೆ ಜನರ ಕಣ್ಣು ಬಿದ್ದಿದೆ ಎಚ್ಚರಿಕೆ ಅಗತ್ಯ ಎಂದು ಹೇಳಿದ್ದನ್ನು ಸ್ಮರಿಸಬಹುದಾಗಿದೆ.

error: Content is protected !!