ಕಾಂತಾರ -2ಕ್ಕೆ ಭಾರೀ ವಿಘ್ನ: ಬಾರೆಬೈಲ್‌ ವಾರಾಹಿ ಪಂಜುರ್ಲಿ ರಿಷಬ್‌ ಶೆಟ್ಟಿಗೆ ನೀಡಿದ ಭಯಾನಕ ಎಚ್ಚರಿಕೆ ಏನು?

ಮಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುವ ಕಾಂತಾರ 1 ಚಿತ್ರ ಭಾರೀ ಯಶಸ್ವಿಯಾಗಿ ಕೀರ್ತಿ, ಸಂಪತ್ತು, ಪ್ರಶಸ್ತಿಯನ್ನು ಕೊಡುವುದರ ಜೊತೆಗೆ ವಿವಾದವನ್ನೇ ಮೈಗೆಳೆದುಕೊಂಡಿತ್ತು. ಇದರ ಬೆನ್ನಲೇ ರಿಷಬ್‌ ಶೆಟ್ಟರು ಕಾಂತಾರ ಭಾಗ- 2ರ ಚಿತ್ರೀಕರಣ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಮುಗಿಯಬೇಕಿತ್ತು. ಆದರೆ ಈಚೆಗೆ ಸಿನಿಮಾದ ಕೆಲಸಗಳು ಅಂದುಕೊಂಡಂತೆ ಸಾಗುತ್ತಿಲ್ಲ. ಏನಾದರೊಂದು ವಿಘ್ನ ಕಾಡುತ್ತಲೇ ಇದೆ.

ಹೀಗಾಗಿ ರಿಷಬ್‌ ಶೆಟ್ಟರು ಮತ್ತೆ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ಈತ್ತೀಚೆಗೆ ಮಂಗಳೂರಿನಲ್ಲಿ ನಡುರಾತ್ರಿ ನಡೆದ ಪಂಜುರ್ಲಿ ನೇಮಕ್ಕೆ ಇಬ್ಬರು ಮಕ್ಕಳೊಂದಿಗೆ ಪತ್ನಿ ಸಮೇತ ಬೆಂಗಳೂರಿನಿಂದಲೇ ದೈವದ ಉತ್ಸವಕ್ಕೆ ಬಂದಿದ್ದ ರಿಷಬ್ ಶೆಟ್ಟಿ ದೈವದ ಮುಂದೆ ಮಂಡಿಯೂರಿದ್ದಾರೆ. ರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆ ವರೆಗೂ ದೈವದ ನೇಮದಲ್ಲಿ ಪಾಲ್ಗೊಂಡಿದ್ದಾರೆ.

ಅಂದಹಾಗೆ ರಿಷಬ್‌ ಶೆಟ್ಟರು ಹೋಗಿರುವುದು ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವಗಳ ವಾರ್ಷಿಕ ನೇಮಕ್ಕೆ. ಅಲ್ಲಿನ ಪ್ರಧಾನ ದೈವ ವಾರಾಹಿ ಪಂಜುರ್ಲಿಯ ಮುಂದೆ ನೋವು ತೋಡಿಕೊಂಡಿದ್ದಾರೆ.

ಆಗ ದೈವ ನಟನನ್ನು ಸಂತೈಸಿ, ʻಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನೀನು ನಂಬಿದ ದೈವ ಕೈಬಿಡುವುದಿಲ್ಲʼ ಎಂದು ದೈವ ಆಶ್ವಾಸನೆ ನೀಡಿದೆ.

‘ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ಆದರೆ ಕೇಡು ಆಗದಂತೆ ನೋಡಿಕೊಳ್ತೇನೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ ಎಂದು ಅಭಯ ನೀಡಿದೆ. ಮಂಗಳೂರಿನಲ್ಲಿ ಕೈಮುಗಿದು ಬೇಡಿಕೊಂಡ ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ಸಿಕ್ಕಿದೆ.
ಕಾಂತಾರ-1 ಈ ವರ್ಷ ಅಕ್ಟೋಬರ್‌ 2 ರಂದು ರಿಲೀಸ್‌ ಆಗುತ್ತದೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ ಎಡವಟ್ಟುಗಳ ಮೇಲೆ ಎಡವಟ್ಟಾಗಿ ಕಾಂತಾರ ಭಾಗ 2ರ ಕೆಲಸಗಳು ಸಾಂಗವಾಗಿ ನೆರವೇರುತ್ತಿಲ್ಲ. ಇತ್ತೀಚೆಗೆ ಅರಣ್ಯ ಇಲಾಖೆಯಿಂದ ಕಿರಿಕಿರಿ ಅನುಭವಿಸಿದ್ದರು. ಚಿತ್ರದ ಸೆಟ್ಟಿಗೆ ಬೆಂಕಿ ಬಿದ್ದಿತ್ತು. ಅಲ್ಲದೆ ಚಿತ್ರದ ವಿರುದ್ಧ ಕೆಲವರು ತಗಾದೆ ಎತ್ತಿದ್ದು, ಜಾಲತಾಣಗಳಲ್ಲಿ ಚರ್ಚಿಸಲಾರಂಭಿಸಿದ್ದಾರೆ.

 

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

error: Content is protected !!