ಮಥುರಾ: ಮಹಮೂದ್‌ಪುರ್ ನಿಂದ ದೀಗ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ನಹಲಾ ದೇವಿಯಾ ಸೇತುವೆಯ ಬಳಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಹೋದರರು ಸೇರಿದಂತೆ ನಾಲ್ವರು ಯುವಕರು ಮೃತಪಟ್ಟ ಘಟನೆ ಮಥುರಾದಲ್ಲಿ ಬುಧವಾರ(ಫೆ.18) ತಡರಾತ್ರಿ ಸಂಭವಿಸಿದೆ.

ಮೃತರನ್ನು ಬಲದೇವಗಢದ ನಿವಾಸಿಗಳಾದ ರಾಹುಲ್ (23), ಅವರ ಸಂಬಂಧಿ ಸಹೋದರರಾದ ಅಮಿತ್ (23) ಮತ್ತು ಮೋಹಿತ್ (21) ಎಂದು ಗುರುತಿಸಲಾಗಿದೆ.

ನಾಲ್ಕನೇ ವ್ಯಕ್ತಿ ಇವರ ಸ್ನೇಹಿತನಾಗಿದ್ದು, ಸುಮಾರು 20 ವರ್ಷದ ಯುವಕನೆಂದು ಅಂದಾಜಿಸಲಾಗಿದೆ. ಆತನ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.