ಉದ್ಯಮಿ ಅಬ್ದುಲ್‌ ಲತೀಫ್‌ ಕೊಲೆ ಪ್ರಕರಣ: ಆರೋಪಿಗೆ ಜಾಮೀನು

ಮೂಲ್ಕಿ: 2020ರಲ್ಲಿ ಮುಲ್ಕಿಯ ಎಚ್‌ಡಿಎಫ್‌ಸಿ(HDFC Bank) ಬ್ಯಾಂಕಿನ ಎದುರುಗಡೆ ಸಂಭವಿಸಿದ್ದ ಯುವ ಉದ್ಯಮಿ ಅಬ್ದುಲ್ ಲತೀಫ್ ಎನ್ನುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೊಹಮ್ಮದ್ ರಾಜೀಮ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಉದ್ಯಮಿ ಅಬ್ದುಲ್ ಲತೀಫ್ ಹತ್ಯೆ ಮಾಡಿದ ಆರೋಪ ಹೊರಿಸಿ ಸುಮಾರು ಹತ್ತು ಜನರ ಮೇಲೆ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಪ್ರಕರಣವು ಮಂಗಳೂರಿನ ಆರನೇ ಜಿಲ್ಲಾ ನ್ಯಾಯಾಲಯ ಮಂಗಳೂರಿನಲ್ಲಿ ವಿಚಾರಣೆಯಲ್ಲಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಆರೋಪಿ ರಾಜೀಮ್‌ಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾರಿಯಾದ ಜಾಮೀನನ್ನು ಮಾನ್ಯ ಹೈಕೋರ್ಟ್ ರದ್ದುಪಡಿಸಿತ್ತು. ಆಗ ಆತ ಸುಪ್ರೀಂ ಕೋರ್ಟ್‌ನಲ್ಲಿ ಈ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು. ಮಾನ್ಯ ಸುಪ್ರೀಂ ಕೋರ್ಟ್ ಹೈಕೋರ್ಟ್ ರದ್ದುಪಡಿಸಿದ ಆದೇಶವನ್ನು ಎತ್ತಿ ಹಿಡಿದು ಅರ್ಜಿಯನ್ನು ತಿರಸ್ಕಾರ ಮಾಡಿರುತ್ತು. ಇದೀಗ ಆರೋಪಿ ಮೊಹಮ್ಮದ್ ರಾಜೀಮ್ ಮಾನ್ಯ ಹೈಕೋರ್ಟಿನ ಮುಂದೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಮಾನ್ಯ ಹೈಕೋರ್ಟ್ ಸದ್ರಿ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿ ಜಾಮಿನಿನ ಮೇಲೆ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಆರೋಪಿಯ ಪರವಾಗಿ ಹೈಕೋರ್ಟಿನ ಖ್ಯಾತ ಹಿರಿಯ ವಕೀಲರಾದ ಅರುಣ್ ಶ್ಯಾಮ್, ಸುಯೋಗ್ ಹೇರಳೆ, ಮತ್ತು ಮಹಮ್ಮದ್ ಅಸ್ಗರ್ ಮುಡಿಪು ವಾದವನ್ನು ಮಂಡಿಸಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮೂಲ್ಕಿ ಉದ್ಯಮಿ ಲತೀಫ್‌ ಹತ್ಯೆ ಪ್ರಕರಣ: ವಿದೇಶದಲ್ಲಿ ಅಡಗಿದ್ದ ಆರೋಪಿ ಅರೆಸ್ಟ್

error: Content is protected !!