ಮಂಗಳೂರು: ಕೊಡಿಯಾಲ್‌ಬೈಲ್ ಅಂಗಡಿಯಿಂದ 3.30 ಲಕ್ಷ ರೂ. ನಗದು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಮಗಳೂರು-ಕಡೂರಿನ ಯಶವಂತ ನಾಯಕ್ (19) ಮತ್ತು ಶಕ್ತಿನಗರದ ಲೇಬರ್ ಕಾಲೋನಿಯ ನಿವಾಸಿ ನಿರೂಪ್ ಅಲಿಯಾಸ್ ಶ್ರವಣ್ (19) ಎಂದು ಹೆಸರಿಸಲಾಗಿದೆ.
ಯಶವಂತ್ ಕಳ್ಳತನ ಮಾಡಿದ್ದ ಅಂಗಡಿಯಲ್ಲಿ ಹಗಲಿನ ವೇಳೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಶ್ರವಣ್ ಕೆಲವು ಸಮಯದ ಹಿಂದೆ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಜೂನ್ 28 ರ ರಾತ್ರಿ ಅಂಗಡಿಯ ಸಿಬ್ಬಂದಿ ದಿನದ ವ್ಯಾಪಾರ ಸಂಗ್ರಹವಾದ 3,33,030 ರೂ.ಗಳನ್ನು ಲಾಕರ್ ಒಳಗೆ ಇಟ್ಟು ಅಂಗಡಿಗೆ ಬೀಗ ಹಾಕಿದ್ದು, ಜೂನ್ 30 ರ ಬೆಳಿಗ್ಗೆ, ಅಂಗಡಿಯ ಶಟರ್ ಲಾಕ್ ತೆರೆದಿರುವುದನ್ನು ಕಂಡು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಘಟನೆ ನಡೆಯುವ ಕೆಲವು ದಿನಗಳ ಹಿಂದೆ ಅಂಗಡಿಯ ಶಟರ್ ಲಾಕ್‌ನ ಕೀಲಿ ನಾಪತ್ತೆಯಾಗಿತ್ತು. ಕಳ್ಳತನಕ್ಕೆ ಅದೇ ಕೀಲಿಯನ್ನು ಬಳಸಲಾಗಿದೆ ಎಂಬ ಶಂಕೆಯ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳಿಂದ ಕದ್ದ ಲಾಕರ್, ನಗದು ಮತ್ತು ಅಪರಾಧಕ್ಕೆ ಬಳಸಲಾದ ಮೋಟಾರ್ ಸೈಕಲನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t