ಭಾರತೀಯರಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿದ ಮೋದಿ ಸರ್ಕಾರ!

ನವದೆಹಲಿ: ಇಸ್ರೇಲ್-ಯುಎಸ್-ಇರಾನ್ ಸಂಘರ್ಷ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳಿಗೆ ಸಹಾಯ ಒದಗಿಸಲು ವಿದೇಶಾಂಗ ಸಚಿವಾಲಯ(MEA) ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಕೂಡ ನೀಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್​ನಲ್ಲಿ ಕೆಲವು ವಿವರಗಳನ್ನು ಹಂಚಿಕೊಂಡಿದ್ದು, “ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ಸಚಿವಾಲಯದಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ” ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ನಿಯಂತ್ರಣ ಕೊಠಡಿ ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸುತ್ತದೆ. ಇದನ್ನು ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು. 1800118797(ಟೋಲ್ ಫ್ರೀ), +91 11 2301 2113, +91 11 2301 4104 ಮತ್ತು +91 11 2301 7905. ವಿದೇಶಾಂಗ ಸಚಿವಾಲಯವು ಈ ಪ್ರದೇಶದಾದ್ಯಂತದ ಭಾರತೀಯ ರಾಯಭಾರ ಕಚೇರಿಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸಿದೆ.

ಭಾರತೀಯ ರಾಯಭಾರ ಕಚೇರಿಗಳಿಗೆ ತುರ್ತು ಸಂಖ್ಯೆಗಳು:
ಬಹ್ರೇನ್: +973 39418071
ಇರಾನ್: +98 9128109115 / +98 912810910 / +98 932179359
ಇರಾಕ್: +964 771 651 1185 / +964 770444 4899
ಇಸ್ರೇಲ್: +972 54 7520711 / +972 54 2428378
ಜೋರ್ಡಾನ್: +962 770 422 276
ಕುವೈತ್: +965 65501946
ಲೆಬನಾನ್: +961 76860128
ಒಮನ್: +968 98282270 (WhatsApp) / 80071234 (ಟೋಲ್ ಫ್ರೀ)
ಕತಾರ್: +974 55647502
ರಮಲ್ಲಾ, ಪ್ಯಾಲೆಸ್ಟೈನ್: +970 592916418
ಸೌದಿ ಅರೇಬಿಯಾ (ರಿಯಾದ್): +966 11 4884697 / 800 247 1234 (ಟೋಲ್ ಫ್ರೀ)
ಸೌದಿ ಅರೇಬಿಯಾ (ಜೆಡ್ಡಾ): +966 126648660 / +966 12 2614093
ಯುನೈಟೆಡ್ ಅರಬ್ ಎಮಿರೇಟ್ಸ್: +971 543090571 (WhatsApp) / 800 46342 (ಟೋಲ್ ಫ್ರೀ)

error: Content is protected !!