ಮದುವೆ ಮುನ್ನಾ ದಿನ ಬ್ಯೂಟಿಪಾರ್ಲರ್‌ಗೆ ಹೋದ ಬೋಳಾರದ ನವವಧು ಎಲ್ಲಿಗೆ ಹೋದಳು?

ಮಂಗಳೂರು: ಎಲ್ಲವೂ ಅಂದಹಾಗೆ ನಡೆದಿದ್ದರೆ ಬೋಳಾರದ ಪಲ್ಲವಿ(22) ಗಂಡನ ಮನೆಯಲ್ಲಿರುತ್ತಿದ್ದಳು. ಯಾಕೆಂದರೆ ತಾನು ಇಷ್ಟಪಟ್ಟಿದ್ದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬೋಳಾರದ ಪಲ್ಲವಿ ಏ.16ರಂದು ಹಸೆಮನೆ ಏರಿ ಇಂದು ಗಂಡನ ಮನೆಯಲ್ಲಿರುತ್ತಿದ್ದಳು. ಆದರೆ ಮದುವೆಯ ಮುನ್ನಾ ದಿನ ಅಂದರೆ ಮಹೆಂದಿ ಆಚರಣೆಯ ಸಂದರ್ಭ ಬ್ಯೂಟಿಪಾರ್ಲರ್‌ಗೆ ಮೆಹೆಂದಿ ಹಾಕಿಕೊಳ್ಳಲು ಒಂಟಿಯಾಗಿ ಹೋಗಿದ್ದ ಬೋಳಾರದ ಪಲ್ಲವಿ ಇದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.

ಈಕೆಯನ್ನು ಕೈ ಹಿಡಿದು ಸುಖ ಸಂಸಾರದ ಕನಸು ಕಂಡಿದ್ದ ಈಕೆ ಕೈಹಿಡಿಯಬೇಕಾಗಿದ್ದ ಹುಡುಗ ಕಂಗಾಲಾಗಿದ್ದಾನೆ.

ಬೋಳಾರದ ಪಲ್ಲವಿಯ ಒಪ್ಪಿಗೆಯಂತೆ ನಿಶ್ಚಿತಾರ್ಥವಾಗಿ ಏ.16ರಂದು ವಿವಾಹ ನಿಗದಿಯಾಗಿತ್ತು. ಏ.15ರಂದು ಮಧ್ಯಾಹ್ನ ಬೋಳಾರದ ಪಲ್ಲವಿ ಮೆಹಂದಿ ಹಾಕಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ಬೋಳಾರದ ಮನೆಯಿಂದ ಒಬ್ಬಳೇ ಹೋಗಿದ್ದಳು.

ಆದರೆ ವಾಪಸ್ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ.

ಚಹರೆ:
ಬೋಳಾರದ ಪಲ್ಲವಿ 5 ಅಡಿ ಎತ್ತರವಿದ್ದು, ಬಿಳಿ ಮೈ ಬಣ್ಣ ಹೊಂದಿದ್ದು, ಸಾಧಾರಣ ಶರೀರ ಹೊಂದಿದ್ದಾಳೆ. ಕಪ್ಪು ಬಣ್ಣದ ಉದ್ದ ಕೂದಲು ಹೊಂದಿರುವ ಪಲ್ಲವಿ ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ. ಈಕೆಯ ಕುರಿತು ಮಾಹಿತಿ ದೊರೆತಲ್ಲಿ ತುರ್ತಾಗಿ ಮಂಗಳೂರು ದಕ್ಷಿಣ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

error: Content is protected !!