ಬಂಟ್ವಾಳ: ಬಿ. ಮೂಡಾ ಗ್ರಾಮದ ಪರ್ಲಿಯಾ ದ ಕೋಡಿಮಜಲ್ ಎಂಬಲ್ಲಿ ಜನ ವಸತಿ ಇರುವ ಪ್ರದೇಶದಲ್ಲಿ ಕಾಳಿಂಗ ಸರ್ಪ ಮಾದರಿಯ ವಿಚಿತ್ರ ಹಾವೊಂದು ಕಾಣಿಸಿದ್ದು, ಊರಿನ ಜನರು ಬೆಚ್ಚಿಬಿದ್ದಿದ್ದಾರೆ. ಹಾವಿನ ಒಂದು ಪಾರ್ಶ್ವದ ದೃಶ್ಯ ಸೆರೆಯಾಗಿದ್ದು, ನಾವು ಇದುವರೆಗೆ ಇಂತಹಾ ಹಾವನ್ನು ನೋಡಿಯೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಿನ್ನೆ ಸಂಜೆ ಮಕ್ಕಳು ಆಟ ಆಡುತ್ತಿದ್ದಾಗ ಮನೆಯೊಂದರ ಕಂಪೌಂಡ್ ನಲ್ಲಿ ಬೃಹತ್ ಗಾತ್ರದ ಅಪರೂಪದ ಹಾವು ತಿರುಗಾಡುತ್ತಿತ್ತು. ತಕ್ಷಣ ಉರಗ ತಜ್ಞರನ್ನು ಕರೆಸಲಾಗಿದ್ದು, ಅವರು ಬರುವಷ್ಟರಲ್ಲಿ ಆ ಹಾವು ಸಮೀಪ ದ ತೋಟ ದ ಕಡೆ ಹೋಗಿದೆ.
ಈ ಹಾವು ನೋಡಲು ಕಳಿಂಗ ಸರ್ಪದಂತೆ ಇದ್ದು, ಆದರೆ ಕಳಿಂಗ ಸರ್ಪಕ್ಕಿಂತ ಕೊಂಚ ಭಿನ್ನವಾಗಿದೆ. ಇದು ಯಾವ ಜಾತಿದ್ದು, ಮನುಷ್ಯರಿಗೆ ತೊಂದರೆ ಇದೆಯೇ ಎಂದು ತಿಳಿದುಬಂದಿಲ್ಲ. ಈ ಪ್ರದೇಶದಲ್ಲಿ ಮನೆಗಳು ಇದ್ದು ಇಲ್ಲಿನ ನಿವಾಸಿಗಳಿಗೆ ಭಯ ಶುರುವಾಗಿದೆ.
ಈ ಪ್ರದೇಶದಲ್ಲಿ ತೋಟ ಇರುವುದರಿಂದ ಮುಳ್ಳು ಹಂದಿ, ನಾಗಾರ ಹಾವು, ಹೆಬ್ಬಾವು ಓಡಾಡುವುದು ಸಾಮಾನ್ಯ ವಾಗಿದ್ದರೂ, ಈ ತರಹದ ಹಾವು ಇದೇ ಮೊದಲ ಸಲ ಇಲ್ಲಿಯವರು ನೋಡಿದ್ದಾರೆ. ತೋಟದಲ್ಲಿ ಕೆಲಸ ಮಾಡುವವರಿಗೆ ಸ್ಥಳೀಯರು ಜಾಗ್ರತೆಯಲ್ಲಿ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ಕಳೆದ ಕೆಲ ದಿನಗಳಿಂದ ಸಣ್ಣ ಸಣ್ಣ ನಾಯಿ ಮರಿಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿವೆ. ಇದೇ ಹಾವು ಅವುಗಳನ್ನು ತಿಂದಿರ ಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ