ಪಂಜ ಶಾಲೆಯ ಮಕ್ಕಳಿಗೆ ಉದ್ಯಮಿಯಿಂದ ಸ್ಟೀಲ್ ಪ್ಲಾಸ್ಕ್ ವಿತರಣೆ

ಪಂಜ : ಸಾರ್ವಜನಿಕ ಶಿಕ್ಷಣ ಇಲಾಖೆ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಂಜ ಮಂಗಳೂರು ಉತ್ತರ ವಲಯ ಇದರ ಸಭಾಂಗಣದಲ್ಲಿ ಜೂ.25 ರ ಗುರುವಾರದಂದು ಪಂಜ ಶಾಲಾ ಮಕ್ಕಳು ಹಾಗೂ ಸ್ಥಳಿಯ ಅಂಗನವಾಡಿ ಮಕ್ಕಳಿಗೆ ಉದ್ಯಮಿ ಸುಭಾಷ್ ಚಂದ್ರ ಹೆಗ್ಡೆ ಪುಣೆ ಅವರು ಕೊಡುಗೆಯಾಗಿ ಕುಡಿಯುವ ನೀರಿನ ಸ್ಟೀಲ್ ಪ್ಲಾಸ್ಕ್ ಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಊರಿನ ದಾನಿಗಳಾದ ಸದಾನಂದ ಶೆಟ್ಟಿ ಪಂಜ, ಶಾಲಾ ಎಸ್ .ಡಿ .ಎಂ ಸಿ ಅಧ್ಯಕ್ಷ ನವೀನ್ ಸಾಲಿಯನ್ ಪಂಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್. ಎಂ .ಶೆಟ್ಟಿ ಬೈಲಗುತ್ತು, ನವೀನ್ ಶೆಟ್ಟಿ ನಲ್ಯಗುತ್ತು, ಶಾಲಾ ಮುಖ್ಯ ಶಿಕ್ಷಕಿ ವಸಂತಿ. ಕೆ, ಸಹ ಶಿಕ್ಷಕರಾದ ಪಲ್ಲವಿ,ಕವಿತಾ, ಚೈತ್ರ ಶೆಟ್ಟಿ ಅಂಗನವಾಡಿ ಸಹ ಕಾರ್ಯಕರ್ತೆ ರೇಷ್ಮಾ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!