
ಬಜ್ಪೆ: ಹಳೆ ವಿದ್ಯಾರ್ಥಿ ಸಂಘ(ರಿ) ಕರಂಬಾರು ವತಿಯಿಂದ 1 ಲಕ್ಷ 50,000 ರೂಪಾಯಿ ಮೌಲ್ಯದ ಉಚಿತ ಸಮವಸ್ತ್ರ ವಿತರಣೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರರಾದ ಸತೀಶ್ ದೇವಾಡಿಗ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಆರ್ಥರ್ ಪಿರೇರಾ ಮಾತನಾಡಿ ಕರಂಬಾರು ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಸತೀಶ್ ದೇವಾಡಿಗರ ಪಾತ್ರ ಮಹತ್ತರವಾದದ್ದು, ನಾನು ಕನಸು ಕಂಡಿದ್ದೆ ಶಾಲೆಯನ್ನು ಅಭಿವೃದ್ದಿ ಪಡಿಸಬೇಕೆಂದು ನನ್ನ ಕನಸನ್ನು ಸತೀಶ್ ದೇವಾಡಿಗರು ನನಸು ಮಾಡಿದರು. 40 ಮಕ್ಕಳಿದ್ದ ಶಾಲೆ 350 ಮಕ್ಕಳ ಗಡಿ ದಾಟಿದ್ದು ನಿಜವಾಗಿ ಅದ್ಭುತ ಸಾಧನೆ. ಉತ್ತಮ ಮೂಲಭೂತ ಸೌಕರ್ಯ ಶಾಲೆಯಲ್ಲಿದ್ದೆ , ಇಲ್ಲಿ ಕಲಿಯುವ ಮಕ್ಕಳು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ಶ್ರೇಷ್ಠ ಇಂಜಿನಿಯರ್ ವಿಶ್ವೇಶ್ವರಯ್ಯರ ರಂತೆ ಆಗಲಿ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೊರೇಶನ್ ಮಾಲಕರ ಸಂಘದ ಸ್ಥಾಪಕ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ , ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಗುಣಪಾಲ ದೇವಾಡಿಗ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಶಿಕ್ಷಣ ಕಾರ್ಯದರ್ಶಿ ಕೃಷ್ಣಾನಂದ.ಡಿ, ಸಾಂಸ್ಕತಿಕ ಕಾರ್ಯದರ್ಶಿ ಲೋಕೇಶ್ M.B ಮತ್ತು ಆಕ್ಷಿತ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ನೇತ್ರಕ್ಷಿ ಮತ್ತು ಉಮೇಶ್, ಗೌರವ ಸಲಹೆಗಾರದ ಶಂಕರ್ ಶೆಟ್ಟಿ ಮತ್ತು ಪದ್ಮನಾಭ ಅಮೀನ್ ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ. ಜೆ ಸ್ವಾಗತಿದರು, ಬಬಿತಾ ನಿರೂಪಿಸಿದರು, ಪವಿತ್ರ ಪ್ರಕಾಶ್ ವಂದಿಸಿದರು