ವಾಹನ ಸವಾರರಿಗೆ ಇಲ್ಲಿದೆ ಬಂಪರ್ ಆಫರ್! ಟ್ರಾಫಿಕ್ ದಂಡ ಪಾವತಿಗೆ 50% ಭರ್ಜರಿ ರಿಯಾಯಿತಿ!!

ನಿಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ (E-Challan) ಬಾಕಿ ಇದೆಯೇ? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರದ ವಿಶೇಷ ವಿನಾಯಿತಿಯಡಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಬಾಕಿ ಇರುವ ಟ್ರಾಫಿಕ್ ದಂಡದ ಮೊತ್ತದಲ್ಲಿ ಭರ್ಜರಿ 50% ರಿಯಾಯಿತಿಯನ್ನು ಪ್ರಕಟಿಸಿದೆ. ಲೋಕ ಅದಾಲತ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ರಿಯಾಯಿತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸವಾರರು ತಮ್ಮ ಬಾಕಿ ಪ್ರಕರಣಗಳನ್ನು ಅರ್ಧ ಬೆಲೆಗೆ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ರಿಯಾಯಿತಿಯ ಅವಧಿ ಮತ್ತು ನಿಯಮಗಳು:
ಅವಧಿ: ಈ ವಿಶೇಷ ರಿಯಾಯಿತಿ ಸೌಲಭ್ಯವು 21 ಜೂನ್ 2026 ರಿಂದ 10 ಜುಲೈ 2026 ರವರೆಗೆ ಮಾತ್ರ ಲಭ್ಯವಿರುತ್ತದೆ.
ಮೇ 2026 ರ ಮೊದಲು ನೋಂದಾಯಿಸಲಾದ ಎಲ್ಲಾ ಬಾಕಿ ಸಂಚಾರ ಇ-ಚಲನ್ ಪ್ರಕರಣಗಳಿಗೆ ಮಾತ್ರ ಈ 50% ರಿಯಾಯಿತಿ ಅನ್ವಯಿಸುತ್ತದೆ.

“ದಂಡ ರಹಿತವಾಗಿ, ಸುರಕ್ಷಿತ ಸಂಚಾರಕ್ಕೆ ನೀವು ಮುಂದಾಗಿ. ಜವಾಬ್ದಾರಿಯುತ ನಾಗರಿಕರಾಗಿ ನಿಯಮ ಪಾಲಿಸಿ, ದಂಡ ಪಾವತಿಸಿ ಕಾನೂನಿಗೆ ಗೌರವ ನೀಡಿ.”
ವಾಹನ ಸವಾರರು ತಡಮಾಡದೇ ಈ ಸೀಮಿತ ಅವಧಿಯ ಅವಕಾಶವನ್ನು ಬಳಸಿಕೊಂಡು, ತಮ್ಮ ವಾಹನಗಳ ಮೇಲಿರುವ ಬಾಕಿ ಇ-ಚಲನ್ ದಂಡವನ್ನು ಇಂದೇ ಪಾವತಿಸಿ ನಿಶ್ಚಿಂತರಾಗಲು ಕೋರಲಾಗಿದೆ.

error: Content is protected !!