
ಉಡುಪಿ: ಉದ್ಯಾವರ ಸೇತುವೆಯ ಮೇಲೆ ತನ್ನ ಸ್ಕೂಟರ್ ಇಟ್ಟು ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉದ್ಯಾವರ ಪಿತ್ರೋಡಿ ನಿವಾಸಿ ರಮೇಶ್-ಪ್ರಮೋದಿನಿ ಶೆಟ್ಟಿ ಅವರ ಪುತ್ರ ಹರ್ಷಿತ್ ಶೆಟ್ಟಿ (28) ಸಾವಿಗೆ ಶರಣಾದ ದುರ್ದೈವಿ.
ಇಂದು ನಸುಕಿನ 5 ಗಂಟೆ ಸುಮಾರಿಗೆ ಕ್ರಿಕೆಟ್ ಆಡಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹರ್ಷಿತ್ ಹೇಳಿದ್ದು ಬಳಿಕ ಮನೆಗೆ ವಾಪಾಸಾಗಿರಲಿಲ್ಲ. ಸಂಜೆಯ ವೇಳೆ ಸ್ಕೂಟರ್ ಸೇತುವೆಯ ಮೇಲೆ ಪತ್ತೆಯಾಗಿತ್ತು. ಇದರಿಂದಾಗಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳೀಯರು ಹಾಗೂ ಈಶ್ವರ ಮಲ್ಪೆ ನದಿಯಲ್ಲಿ ಹುಡುಕಾಟ ನಡೆಸಿದ್ದು ಸಂಜೆಯ ವೇಳೆಗೆ ಹರ್ಷಿತ್ ಮೃತದೇಹ ಪತ್ತೆಯಾಗಿದೆ. ಮೃತ ಹರ್ಷಿತ್ ಮಲ್ಪೆಯ ಸೊಸೈಟಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.