ಪುತ್ತೂರು ‘ಡೆಲಿವರಿ’ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಮದುವೆಗೆ ಕೊನೆಗೂ ʻಓಕೆʼ – ಜ.31 ಡೆಡ್‌ಲೈನ್, ಪ್ರತಿಭಾ ಕುಳಾಯಿ ಹೇಳಿದ್ದೇನು?

ಮಂಗಳೂರು: ಪುತ್ತೂರು ʻಡೆಲಿವರಿ ಪ್ರಕರಣʼಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಪ್ರತಿಭಾ ಕುಳಾಯಿ ಮಾಹಿತಿ ನೀಡಿದ್ದಾರೆ. ಆಚಾರ್ಯ ಸಮುದಾಯದ ಮಧು ಆಚಾರ್ಯರಿಗೆ ಹುಡುಗ ಶ್ರೀಕೃಷ್ಣ ಜೆ ರಾವ್ ಕಡೆಯವರು ಕರೆ ಮಾಡಿ, ಮದುವೆಗೆ ಒಪ್ಪಿರುವುದಾಗಿ ಹೇಳಿಕೊಂಡು ಸಂಧಾನಕ್ಕೆ ಬಂದಿದ್ದಾಗಿ ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲೊ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಅವರಾಗಿಯೇ ಮದುವೆಗೆ ಒಪ್ಪಿರುವುದರಿಂದ ಮಗುವಿನ ನಾಮಕರಣ ಶಾಸ್ತ್ರವನ್ನು ಫೆಬ್ರವರಿ ಏಳಕ್ಕೆ ಮುಂದೂಡಿದ್ದು, ಅದು ಕಲ್ಲಡ್ಕದಲ್ಲೇ ನಡೆಯುತ್ತದೆ. ಸಂತಸ್ತೆಯನ್ನು ಮದುವೆಯಾಗಲು ಹುಡುಗನಿಗೆ ಜನವರಿ 31ರವರೆಗೆ ಕಾಲಾವಕಾಶ ಕೊಡುತ್ತೇವೆ. ಒಂದು ವೇಳೆ ಅವನು ಜ.31ರ ಒಳಗೆ ಮದುವೆ ಆಗುವುದಿಲ್ಲ ಅಂತಾದ್ರೆ ಮಗುವಿನ ನಾಮಕಾರಣ ಶಾಸ್ತ್ರ ಫೆ.7ರಂದು ಕಲ್ಲಡ್ಕದಲ್ಲಿಯೇ ನಡೆಯಲಿದೆ. ಒಟ್ಟಿನಲ್ಲಿ ಅವರಿಬ್ಬರಿಗೂ ಮದುವೆಯಾಗಬೇಕು, ಇಬ್ಬರ ಬಾಳು ಚೆನ್ನಾಗಿರಬೇಕು ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಮೊನ್ನೆ ಸೋಮವಾರ ಸಂತ್ರಸ್ತೆಯ ತಾಯಿ ನಮಿತಾಗೆ ಕರೆ ಮಾಡಿದ ಆಚಾರ್ಯ ಸಮುದಾಯದ ಮಧು ಆಚಾರ್ಯರು, ಹುಡುಗನ ತಂದೆ ತನ್ನೊಂದಿಗೆ ಮಾತುಕತೆ ನಡೆಸಿದ್ದು, ಮದುವೆಗೆ ನಾವು ಒಪ್ಪಿರುವುದಾಗಿ ತಿಳಿಸಿದ್ದಾರೆ. “ನಾನೇ ಮದುವೆ ಮಾಡಿಸುತ್ತೇನೆ, ಸ್ವಲ್ಪ ಕಾಲಾವಕಾಶ ನೀಡಿ, ತೊಟ್ಟಿಲು ಕಾರ್ಯಕ್ರಮ ಮಾಡಬೇಡಿ” ಎಂದು ಹುಡುಗನ ಕಡೆಯವರು ಮಧು ಆಚಾರ್ಯರಲ್ಲಿ ವಿನಂತಿಸಿದ್ದಾಗಿ ಪ್ರತಿಭಾ ಕುಳಾಯಿ ಹೇಳಿದರು.

ಆದರೆ ಸಂಧಾನದ ಹೆಸರಿನಲ್ಲಿ ಹಲವು ಷರತ್ತು–ನಿಬಂಧನೆಗಳನ್ನು ಹಾಕಲಾಗುತ್ತಿದ್ದು, ಇದಕ್ಕೆ ತಾವು ಒಪ್ಪುವುದಿಲ್ಲ ಎಂದರು. “ನಮ್ಮ ಏಕೈಕ ಬೇಡಿಕೆ – ಹುಡುಗನು ಸಂತ್ರಸ್ತೆಯನ್ನು ಮದುವೆಯಾಗಬೇಕು. ಉಳಿದ ಯಾವುದೇ ಷರತ್ತುಗಳಿಗೆ ಅವಕಾಶವಿಲ್ಲ” ಎಂದು ಪ್ರತಿಭಾ ಕುಳಾಯಿ ಹೇಳಿದರು.

ಮಾತುಕತೆಗೆ ಬರುವಾಗ ನಾನಾಗಲೀ, ನಂಜುಂಡಿಯಾಗಲೀ ಅಥವಾ ನಮಿತಾಳ ಜೊತೆಗೆ ಬೇರೆ ಯಾರೂ ಬರಬಾರದು; ನಮಿತಾ ಮತ್ತು ಅವರ ಮಗಳು(ಸಂತ್ರಸ್ತೆ) ಮಾತ್ರ ಬರಬೇಕು ಎಂದು ಅವರು ಹೇಳಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಈ ಬೇಡಿಕೆಗೆ ನಾವು ಒಪ್ಪಿಲ್ಲ, ಏಕೆಂದರೆ ಅಲ್ಲಿ ಹೋಗಿದ ನಂತರ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಭದ್ರತಾ ಕಾರಣಗಳಿಂದಾಗಿ ಈಗಾಗಲೇ ನಂಜುಂಡಿ ಅವರ ಮನೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅವರಿಗೆ ಜೀವ ಬೆದರಿಕೆಯೂ ಇದೆ. ಆದರೆ ನಾವು ಹೋಗುವುದರಿಂದ ಸಮಸ್ಯೆಯಾಗುವುದಂತಿದ್ದರೆ ಸಂಧಾನದ ಮಾತುಕತೆಗೆ ನಾನಾಗಲೀ, ನಂಜುಂಡಿಯವರಾಗಲೀ ಹಾಜರಾಗುವುದಿಲ್ಲ. ಹುಡುಗ-ಹುಡುಗಿ ಮದುವೆಯಾಗಿ ಒಳ್ಳೆಯ ರೀತಿಯಲ್ಲಿ ಬದುಕಬೇಕು ಎಂಬುದೇ ನಮ್ಮ ಆಶಯ ಎಂದರು.

“ಹೆಣ್ಣಿನ ವಿಚಾರದಲ್ಲಿ ತುಟಿ ಬಿಚ್ಚದ ಎಲ್ಲ ಪಕ್ಷದ ರಾಜಕಾರಣಿಗಳೂ ನೀಚರೇ! ʻಡೆಲಿವರಿ ಬಾಯ್‌ʼಗೆ ಮದುವೆ ಮಾಡದೆ ಬಿಡಲ್ಲ: ಪ್ರತಿಭಾ ಕುಳಾಯಿ ಸವಾಲು!!!

ಮಗುವನ್ನು ಆಶ್ರಮಕ್ಕೆ ನೀಡಬೇಕು, ಹುಡುಗನ ಮೇಲಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂಬ ಷರತ್ತುಗಳೂ ನ್ಯಾಯಸಮ್ಮತವಲ್ಲ ಎಂದು ಪ್ರತಿಭಾ ಕುಳಾಯಿ ಅಭಿಪ್ರಾಯಪಟ್ಟರು.

ಸಂಧಾನದ ಹೆಸರಿನಲ್ಲಿ ಮನೆಗೆ ಹೋಗಿ ಮಾತುಕತೆ ನಡೆಸುವುದು ಸರಿಯಲ್ಲ. ಇವರಿಗೂ ಸೂಕ್ತ ಭದ್ರತೆ ಅಗತ್ಯವಿದೆ. ಆದ್ದರಿಂದ ವಿಷಯವು ಪೊಲೀಸ್‌ ಪ್ರೊಟೆಕ್ಷನ್‌ನಲ್ಲಿ ಇತ್ಯರ್ಥವಾಗಬೇಕು.  ಪುತ್ತೂರು ಪೊಲೀಸ್‌ ಠಾಣಾ ಪೊಲೀಸರ ಸಮ್ಮುಖದಲ್ಲಿ ಇಚ್ಛೆ ಇಲ್ಲದಿದ್ದರೆ, ಮಂಗಳೂರು ಪೊಲೀಸ್‌ ಕಮಿಷನರ್‌ ಸಮ್ಮುಖದಲ್ಲೇ ಮದುವೆ ನಡೆಯಬೇಕು ಎಂಬುದು ನನ್ನ ಅಭಿಪ್ರಾಯ. ಈ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಯಾವುದೇ ಸಂಧಾನ ಅಥವಾ ಮಾತುಕತೆ ನಡೆದರೂ ಅದು ಪೊಲೀಸ್ ಠಾಣೆಯಲ್ಲೇ ನಡೆಯಬೇಕು. ಪುತ್ತೂರು ಠಾಣೆಗೆ ಬರಲು ಇಚ್ಛೆಯಿಲ್ಲದಿದ್ದರೆ, ಮಂಗಳೂರು ಪೊಲೀಸ್ ಕಮಿಷನರ್ ಅಥವಾ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ದಿನಾಂಕ ನಿಗದಿಪಡಿಸಿ ಮದುವೆ ನಡೆಸಬಹುದು ಎಂದು ಅವರು ಹೇಳಿದರು.

ಪುತ್ತೂರು ಡೆಲಿವರಿ ಪ್ರಕರಣ: ಹುಡುಗಿ ಸುಸೈಡ್‌ ಮಾಡ್ಲಿಕ್ಕೆ ಹೋಗಿದ್ದಳು- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರತಿಭಾ ಕುಳಾಯಿ

ಪೊಲೀಸ್ ಕೇಸ್ ತನ್ನ ಪಾಡಿಗೆ ಕಾನೂನು ಪ್ರಕಾರ ಮುಂದುವರಿಯುತ್ತದೆ. ಕೇಸಿನಿಂದ ತಪ್ಪಿಸಿಕೊಳ್ಳಲು ನಾಟಕ ನಡೆಯುತ್ತಿರುವ ಶಂಕೆಯೂ ಇದೆ. ಮೊದಲು ಕೂಡಾ ಹೀಗೆಯೇ ಹೇಳಿದ್ದರು. ಹಾಗಾಗಿ ಮೊದಲು ಮದುವೆಯಾಗಲಿ. ನಂತರ ಕಾನೂನು ಪ್ರಕ್ರಿಯೆಗಳನ್ನು ಅದರ ಪ್ರಕಾರವೇ ಎದುರಿಸಲಿ ಎಂದು ಪ್ರತಿಭಾ ಕುಳಾಯಿ ಸ್ಪಷ್ಟಪಡಿಸಿದರು.

ಸಮಾಜಕ್ಕೆ ಈ ಪ್ರಕರಣ ಕೆಟ್ಟ ಸಂದೇಶ ನೀಡುತ್ತಿದೆ. ಬಡವರ ಪರವಾಗಿ ನಿಲ್ಲುವವರು ಕಡಿಮೆ. ಧರ್ಮ–ಜಾತಿ ಹೆಸರಿನಲ್ಲಿ ಮಾತನಾಡುವವರೂ ಮುಂದೆ ಬರಲಿಲ್ಲ. ಇದಕ್ಕೆ ಅಂತ್ಯವಾಗಬೇಕು. ಇವತ್ತು ಸಂತ್ರಸ್ತೆಯ ತಾಯಿ ನಮಿತಾ ಪತ್ರಿಕಾಗೋಷ್ಠಿಗೆ ಹಾಜರಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಪ್ರೆಸ್‌ಗೆ ಬರಬಾರದು ಎಂಬ ಷರತ್ತು ವಿಧಿಸಿರುವುದರಿಂದ ಅವರು ಬಂದಿಲ್ಲ. ಆದರೆ ಇಬ್ಬರ ಜೀವನ ಚೆನ್ನಾಗಾಗುವುದಾದರೆ ಸಂಧಾನಕ್ಕೆ ಸಿದ್ಧ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಆನ್‌ಲೈನ್ ರಿಜಿಸ್ಟರ್ ಮದುವೆಯಾದರೂ ತಕರಾರಿಲ್ಲ. ಯಾವ ರೀತಿಯಾದರೂ ಜನವರಿ 31ರೊಳಗೆ ಮದುವೆಯಾಗಲೇಬೇಕು. ಅದಾಗದಿದ್ದರೆ ಯಾವುದೇ ಕಾನ್ಫ್ರಮೈಸ್ ಇಲ್ಲ. ಈಗಾಗಲೇ ಮಗುವಿಗೆ ಆರು ತಿಂಗಳು ಕಳೆದಿದೆ ಎಂದರು. ಮದುವೆಯಾದ ಬಳಿಕ ಕಾನೂನು ಪ್ರಕ್ರಿಯೆಗಳಿಗಾಗಿ ಕೋರ್ಟ್ ಎಂಬ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ—ಆರು ತಿಂಗಳು, ಒಂದು ವರ್ಷ ಅಥವಾ ಹತ್ತು ವರ್ಷಗಳ ನಂತರ ಹೊಂದಾಣಿಕೆ ಸಾಧ್ಯವಾಗದಿದ್ದರೆ—ಡಿವೋರ್ಸ್ ಪಡೆಯುವ ಅವಕಾಶವೂ ಕಾನೂನಿನಲ್ಲಿ ಇದೆ. ಅವರು ಇಬ್ಬರೂ ಒಂದಾಗಿ ಬದುಕುವುದಿಲ್ಲ ಎಂದು ಈಗಲೇ ಹೇಗೆ ಹೇಳಲು ಸಾಧ್ಯ? ಆದ್ದರಿಂದ ಕಾನೂನು ಪ್ರಕ್ರಿಯೆಗಳು ತಮ್ಮ ಪಾಡಿಗೆ ಮುಂದುವರಿಯುತ್ತವೆ. ಆದರೆ ಮೊದಲು ಮದುವೆಯಾಗಲೇಬೇಕು. ಇದಕ್ಕಾಗಿ ಜನವರಿ 31ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

error: Content is protected !!