ಪುತ್ತೂರು ಡೆಲಿವರಿ ಪ್ರಕರಣ: ಹುಡುಗಿ ಸುಸೈಡ್‌ ಮಾಡ್ಲಿಕ್ಕೆ ಹೋಗಿದ್ದಳು- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರತಿಭಾ ಕುಳಾಯಿ

ಮಂಗಳೂರು: ಹುಡುಗಿ ಮೊನ್ನೆ ಶನಿವಾರ ಸುಸೈಡ್‌ ಮಾಡ್ಲಿಕ್ಕೆ ಹೋಗಿದ್ದಳು. ಅವಳೇ ಯಾಕೆ ಜೀವನದಲ್ಲಿ ಸಫರ್‌ ಆಗ್ಬೇಕು? ಈ ರೀತಿಯ ಅನ್ಯಾಯ ಯಾವ ಹುಡುಗಿಗೂ ಆಗುವುದು ಬೇಡ. ಹಣ ಇದೆ ಎಂದ ಮಾತ್ರಕ್ಕೆ ಬಸಿರು ಮಾಡಿ ಇದೇ ರೀತಿ ಹಣ ಕೊಟ್ರೆ ಅದು ನ್ಯಾಯವಾ? ಒಂದು ವೇಳೆ ಏನಾದ್ರೂ ಆದ್ರೆ ಕ್ಯಾಂಡಲ್ ಉರಿಸಿ ಸ್ಟೇಟಸ್‌ ಹಾಕಿ ಮುಗಿಸ್ತಾರೆ. ಇಲ್ಲಿ ಹಾಗಾಗಬಾರದು. ಜಾತಿ ಧರ್ಮ ನೋಡದೆ, ಎಲ್ಲರೂ ಹುಡುಗಿಗೆ ನ್ಯಾಯ ಕೊಡಿಸಬೇಕು. ಮಸ್ಲಿಮರು ಕೂಡಾ ಬನ್ನಿ ಪ್ರತಿಭಟಿಸಿ, ನ್ಯಾಯ ಕೊಡಿಸಿ ಎಂದು ಪ್ರತಿಭಾ ಕುಳಾಯಿ ಸವಾಲು ಹಾಕಿದ್ದಾರೆ.

ಮಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದ ಅವರು, ಶ್ರೀಕೃಷ್ಣ ಜೆ. ರಾವ್‌ ಅವಳನ್ನು ಮದುವೆಯಾಗಬೇಕೆಂದರೆ ಅವನ ಈಗ ದೊಡ್ಡ ದೊಡ್ಡ ಕಂಡಿಷನ್ಸ್‌ ಹಾಕಿದ್ದಾರೆ. ಮಗುವನ್ನು ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಿದ ಬಳಿಕ ಆತ ಅವಳನ್ನು ಮದುವೆಯಾಗುತ್ತಾನೆ. ಮದುವೆಯಾದ ಕ್ಷಣದಲ್ಲೇ ಆತ ದೈವೋರ್ಸ್‌ ಕೊಡುತ್ತಾನೆ. ಪರಿಹಾರವಾಗಿ ಹುಡುಗಿಗೆ 50 ಲಕ್ಷ ಪರಿಹಾರ ನೀಡಲಾಗುತ್ತದೆ ಆಮೇಲೆ ನಮ್ಮ ಸುದ್ದಿಗೆ ಬರಬಾರದು, ಕೇಸ್‌ ವಾಪಸ್‌ ತೆಗೆದುಕೊಳ್ಳಬೇಕೆಂದು ಎಂದು ಕಂಡಿಷನ್ಸ್‌ ಹಾಕಿದ್ದಾರೆ. ನಮಿತಾ ಕುಟುಂಬಿಕರು ಬಡವರಿರಬಹುದು ಆದರೆ ಇವರಿಗೆ ಹಣದ ಅಗತ್ಯವಿಲ್ಲ. ಬೇಕಾದ್ರೆ ನಾನೇ ಕೃಷ್ಣ ಜೆ. ರಾವ್‌ ಕುಟುಂಬಿಕರಿಗೆ 50 ಲಕ್ಷ ಕೊಡ್ತೇನೆ. ಕೃಷ್ಣ ಜೆ. ರಾವ್‌ ನಮಿತಾ ಅವರ ಮನೆ ಅಳಿಯನಾಗಿ ಇರಬೇಕು ಎಂದು ಸವಾಲು ಹಾಕಿದ್ದಾರೆ.

ಪ್ರಕರಣ ನ್ಯಾಯಾಲಯದಲ್ಲಿರುವಾಗ ಕೇಸ್‌ ವಾಪಸ್‌ ಪಡೆಯಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿಲ್ಲವಾ?, ಮೊನ್ನೆಯ ಪ್ರೆಸ್‌ಮೀಟ್‌ನಲ್ಲಿ ಕೆ.ಪಿ. ನಂಜುಂಡಿ ಎಲ್ಲಾ ವಿಷಯ ಹೇಳಿಲ್ಲ. ಹುಡುಗಿಗೆ ಏಳೂವರೆ ತಿಂಗಳು ತುಂಬಿದಾಗ ಆಕೆ ಗರ್ಭಿಣಿ ಎನ್ನುವ ವಿಚಾರ ಬೆಳಕಿಗೆ ಬಂದಿತು. ಆಗ ಅವಳ ಅಮ್ಮ ಜಗನ್ನಿವಾಸ ರಾವ್‌ ಮನೆಗೆ ಬಂದಿ ಗರ್ಭ ತೆಗೆಸುವಂತೆ 10 ಸಾವಿರ ರೂ. ಗೂಗಲ್‌ ಪೇ ಮಾಡಿದ್ದರು. ಆದರೆ ಯಾವ ಆಸ್ಪತ್ರೆಯವರೂ ಒಪ್ಪಲಿಲ್ಲ. ಕೊನೆಗೆ ಬಂಟ್ವಾಳದಲ್ಲಿ ಯಾರೋ ಒಬ್ಬರನ್ನು ಒಪ್ಪಿಸಿ 8 ಲಕ್ಷ ರೂ. ಆಫರ್‌ ಮಾಡಿ ಗರ್ಭ ತೆಗೆಸುವಂತೆ ಒತ್ತಾಯಿಸಿದ್ದರು. ಆದರೆ ಇದಕ್ಕೆ ನಮಿತಾ ಒಪ್ಪಿರಲಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷೆ, ಸಾಮಾಜಿಕ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇನ್ನು ಹುಡುಗಿ ಮಾಸ್ಕ್‌ ಹಾಕುವುದಿಲ್ಲ. ಮಾಧ್ಯಮದವರೂ ಅವಳ ಫೋಟೋವನ್ನು ಬ್ಲರ್‌ ಮಾಡಿ ತೋರಿಸಬೇಡಿ. ಅವನು ಇವಳನ್ನು ಮದುವೆಯಾಗದಿದ್ದರೆ ಲೈಫ್‌ ಲಾಂಗ್‌ ಮಾಸ್ಕ್‌ ಹಾಕಿಕೊಂಡೇ ಇರ್ಬೇಕಾ? ಅವಳು ಸ್ವ ಇಚ್ಛೆಯಿಂದ ಮಾಸ್ಕ್‌ ತೆಗೆದಿದ್ದಾಳೆ. ಇಬ್ಬರಿಂದಲೂ ತಪ್ಪು ನಡೆದಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಮಗು ಹುಟ್ಟಿದೆ. ಅವನು ಜೈಲಿಗೆ ಹೋಗಲಿ. ಆದರೆ ಹುಡುಗಿಗೆ ನ್ಯಾಯ ಕೊಡಿಸಬೇಕು ಎಂದು ಪ್ರತಿಭಾ ಆಗ್ರಹಿಸಿದರು.

ಮಗುವಿಗೆ ಇದುವರೆಗೆ ನಾಮಕಾರಣ ಆಗಿಲ್ಲ. ಹಾಗಾಗಿ ಜ.24ರಂದು ಹುಡುಗಿಗೆ ನ್ಯಾಯ ಕೊಡಿಸಲು ವಿಫಲರಾದ ಕಲ್ಲಡ್ಕ ಪ್ರಭಾಕರ ಭಟ್‌ ಇರುವ ಕಲ್ಲಡ್ಕದಲ್ಲಿಯೇ ಅದ್ಧೂರಿ ನಾಮಕಾರಣ ನಡೆಸುತ್ತೇವೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಜಾತಿ, ಮತ ಭೇದವಿಲ್ಲದೆ ಭಾಗವಹಿಸಿ ಹುಡುಗಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಎಂದು ಪ್ರತಿಭಾ ವಿನಂತಿಸಿದರು.

ಮದುವೆ ಆಗುತ್ತೇನೆ ಸಂಸಾರ ಮಾಡುವುದಿಲ್ಲ ಎಂದ್ರೆ ಹೇಗೆ? ಅವರಿಗೆ ಮಜಾ ಮಾಡುವುದು ಅಭ್ಯಾಸ ಆಗಿ ಹೋಗಿದೆ. ಹಿಂದೂ ಸಂಘಟನೆಗಳಿಂದ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಎಲ್ಲ ಧರ್ಮದವರು ಹುಡುಗಿ ಪರವಾಗಿ ನಿಲ್ಲಲಿ. ನಮಗೆ ಹಣ ಬೇಡ, ಬೆಂಬಲ ಬೇಕು. ಒಂದು ವೇಳೆ ಇದೇ ಜಾಗದಲ್ಲಿ ಮುಸ್ಲಿಂ ಇದ್ದಿದ್ದರೆ ಅಪ್ಪ ಬದುಕ್ತಾ ಇದ್ನಾ? ಪ್ರಕರಣಕ್ಕೆ ರಾಜಕೀಯ ಬಣ್ಣ ಕೊಡಬೇಡಿ. ನಮಿತಾ ಜೊತೆ ನಿಂತಿದ್ದು, ಮುಸ್ಲಿಂ ಸಮುದಾಯ ಆಗ ಹಿಂದೂ ಸಂಘಟನೆಗಳು, ಬಿಜೆಪಿ ಬರ್ಲಿಲ್ಲ. ಇನ್ನೇನಿದ್ದರೂ ಕೋರ್ಟಲ್ಲಿ ನೋಡ್ತೇವೆ ಎಂದರು.

ಈ ವೇಳೆ ಹುಡುಗಿ ಪೂಜಾ ಮಾತನಾಡಿ, ನಮ್ಮಿಂದ ಇಬ್ಬರಿಂದ ತಪ್ಪು ನಡೆದಿದೆ, ಆದರೆ ನಾಳೆ ನನ್ನ ಮಗು ಅಪ್ಪ ಯಾರು ಅಂತ ಕೇಳಿದ್ರೆ ಏನೂಂತ ಉತ್ತರ ನೀಡಲಿ ಎಂದು ಪೂಜಾ ಪ್ರಶ್ನಿಸಿದರು.

error: Content is protected !!