ಮಂಗಳೂರಿನಲ್ಲಿ 18ರ‌ ಹುಡುಗಿ ನಾಪತ್ತೆ: ಐದು ದಿನ ಕಳೆದರೂ ಸಿಗದ ಸುಳಿವು!

ಮಂಗಳೂರು: ನಗರದ ಬಂದರ್ ಪ್ರದೇಶದ ಮಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 18 ವರ್ಷದ ಯುವತಿ ಸಪನಾ ಎಂಬಾಕೆ ಮಾರ್ಚ್ 6 ರಿಂದ ನಾಪತ್ತೆಯಾಗಿದ್ದಾಳೆ. ಈ ಕುರಿತು ಆಕೆಯ ತಾಯಿ ಚಮೇಲಿ ದೇವಿ ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ತೋಟ ಬೆಂಗ್ರಯ ಬಾಡಿಗೆ ಮನೆಯಲ್ಲಿ ವಾಸವಿರುವ ಚಮೇಲಿ ದೇವಿ ಅವರ ಪುತ್ರಿ ಸಪನಾ, ಕಳೆದ 6-7 ತಿಂಗಳಿಂದ ಬಂದರ್‌ನಲ್ಲಿರುವ ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮಾರ್ಚ್ 6 ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆಂದು ಹೋದವಳು, ರಾತ್ರಿಯಾದರೂ ಮನೆಗೆ ವಾಪಸಾಗಿಲ್ಲ. ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಸಂಬಂಧಿಕರು ಹಾಗೂ ಪರಿಚಿತರ ಬಳಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ನಾಪತ್ತೆಯಾದ ಯುವತಿಯ ಚಹರೆ:
ಎತ್ತರ: 4 ಅಡಿ 8 ಇಂಚು.
ಮೈಬಣ್ಣ: ಸಾಧಾರಣ ಕಪ್ಪು.
ಧರಿಸಿದ್ದ ಬಟ್ಟೆ: ಬಿಳಿ ಬಣ್ಣದ ನೆಟ್ ಇರುವ ಚೂಡಿದಾರ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್.
ಭಾಷೆ: ಹಿಂದಿ ಮತ್ತು ಭೋಜ್‌ಪುರಿ ಮಾತನಾಡುತ್ತಾಳೆ.

ಈ ಚಹರೆಯ ಯುವತಿ ಎಲ್ಲಾದರೂ ಕಂಡುಬಂದಲ್ಲಿ ಅಥವಾ ಆಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪಣಂಬೂರು ಪೊಲೀಸ್ ಠಾಣೆ ಅಥವಾ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ (Control Room) ಗೆ ಮಾಹಿತಿ ನೀಡಲು ಕೋರಲಾಗಿದೆ.

error: Content is protected !!