ಅಬುಧಾಬಿ: ಐಪಿಎಲ್ 2026ರ ಮಿನಿ ಹರಾಜು ಅಂತ್ಯವಾಗಿದೆ. ಎಲ್ಲಾ ತಂಡಗಳು ತಮ್ಮ 25 ಆಟಗಾರರ ಕೋಟಾ ಪೂರ್ಣಗೊಳಿಸಿದೆ. ಒಟ್ಟು 77 ಆಟಗಾರರು ಈ ಬಾರಿಯ ಹರಾಜಿನಲ್ಲಿ ವಿವಿಧ ತಂಡದ ಪಾಲಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು 2026ರ ಐಪಿಎಲ್ ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಖರೀದಿಸಿದ್ದಾರೆ. ಇಂಡಿಯನ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ 7 ಕೋಟಿ ರೂ.ಗೆ ಆರ್‌ಸಿಬಿ ಖರೀದಿ ಮಾಡಿದ್ದು, ಮಂಗೇಶ್ ಯಾದವ್ ಅವರು 5.20 ಕೋಟಿ ರೂ.ಗೆ ಖರೀದಿಯಾಗಿದ್ದಾರೆ. ಈ ಬಾರಿ ಆರ್‌ಸಿಬಿ 6 ಭಾರತೀಯ ಮತ್ತು 2 ವಿದೇಶಿ ಆಟಗಾರರನ್ನು ಸೇರಿಸಿಕೊಂಡಿರುವ ತಂಡವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಆರ್‌ಸಿಬಿ ಖರೀದಿಸಿದ 8 ಆಟಗಾರರು
ವೆಂಕಟೇಶ್ ಅಯ್ಯರ್- 7 ಕೋಟಿ ರೂ.
ಮಂಗೇಶ್ ಯಾದವ್- 5.2 ಕೋಟಿ ರೂ.
ಜಾಕೋಬ್ ಡಫಿ- 2 ಕೋಟಿ ರೂ.
ಸಾತ್ವಿಕ್ ದೇಸ್ವಾಲ್- 30 ಲಕ್ಷ ರೂ.
ಜೋರ್ಡಾನ್ ಕಾಕ್ಸ್- 75 ಲಕ್ಷ ರೂ.
ವಿಕ್ಕಿ ಒಸ್ತ್ವಾಲ್- 30 ಲಕ್ಷ ರೂ.
ಕಾನಿಷ್ಕ್ ಚೌಹಾಣ್- 30 ಲಕ್ಷ ರೂ.
ವಿಹಾನ್ ಮಲ್ಹೋತ್ರಾ- 30 ಲಕ್ಷ ರೂ.