ಮಂಗಳೂರು: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317 D ವತಿಯಿಂದ ಡಿಸೆಂಬರ್ 13, 2025ರಂದು ಮಂಗಳೂರಿನ ಬಾಲಮಟ್ಟದ ಶಾಂತಿ ನಿವಾಸದಲ್ಲಿ ‘ಮಾನವ ಹಕ್ಕುಗಳು’ ಎಂಬ ವಿಷಯದ ಮೇಲೆ ಏಕದಿನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಕಾನೂನು, ಪೊಲೀಸ್ ಇಲಾಖೆ ಹಾಗೂ ಸಮಾಜ ಸೇವಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.



ಕಾರ್ಯಕ್ರಮವನ್ನು ಡಿಸ್ಟ್ರಿಕ್ಟ್ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಉದ್ಘಾಟಿಸಲಿದ್ದು, ಚೀಫ್ ಕೋ–ಆರ್ಡಿನೇಟರ್ ಎಡ್ವಿನ್ ವಾಲ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತೆ (ಟ್ರಾಫಿಕ್) ಮಂಗಳೂರು ನಗರ, ನಜ್ಮಾ ಫರೂಖಿ ಮುಖ್ಯ ಅತಿಥಿಗಳಾಗಿದ್ದು, ವಕೀಲ ಉದಯಾನಂದ ಎ. ಪ್ರಮುಖ ಭಾಷಣ ಮಾಡಲಿದ್ದಾರೆ.
ಬಿ.ಎಂ. ಭಾರತೀ (IPDG–317D), ಎಚ್.ಎಂ. ತಾರಾನಾಥ್ (1st VDG), ಗೋವರ್ಧನ ಕೆ. ಶೆಟ್ಟಿ (2nd VDG), ಎಚ್.ಆರ್. ಚಂದ್ರೇಗೌಡ (ಕ್ಯಾಬಿನೆಟ್ ಕಾರ್ಯದರ್ಶಿ), ಬಾಲಕೃಷ್ಣ ಹೆಗ್ಡೆ (ಕ್ಯಾಬಿನೆಟ್ ಖಜಾಂಚಿ), ನ್ಯಾನ್ಸಿ ಮಸ್ಕರೇನ್ಹಾಸ್ (ಡಿಸ್ಟ್ ಕ್ಯಾಬಿನೆಟ್ ಕೋ-ಆರ್ಡಿನೇಟರ್), ಜ್ಯೋತಿ ಎಸ್. ಶೆಟ್ಟಿ (ಗವರ್ನರ್ ಮುಖ್ಯ ಸಂಯೋಜಕಿ) ಮತ್ತು ವಿ.ಎನ್. ಸುಧರ್ಶನ ಪಾಡಿಯಾರ್ (ಡಿಸ್ಟ್ PRO) ಮುಂತಾದವರು ಭಾಗವಹಿಸಲಿದ್ದಾರೆ.
