Iran and Israel War Effect: ಸೌದೆ ಒಲೆ ಮೊರೆಹೋದ ಹೋಟೆಲ್ ಮಾಲೀಕರು!!

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಸಂಘರ್ಷದಿಂದಾಗಿ ಕಮರ್ಷಿಯಲ್ ಗ್ಯಾಸ್ ಸಂಪೂರ್ಣವಾಗಿ ಬಂದಾಗಿದೆ. ಸಿಲಿಂಡರ್ ಸಿಗದೇ ಹೋಟೆಲ್ ಮಾಲೀಕರು ಸೌದೆ ಒಲೆಯ ಮೊರೆಹೋಗಿದ್ದಾರೆ.

ಗ್ಯಾಸ್ ಸಿಲಿಂಡರ್ ಬಂದ್ ಆದ ಹಿನ್ನೆಲೆ ಸಂಪೂರ್ಣವಾಗಿ ಹೋಟೆಲ್ ಮಾಲೀಕರು ಸೌದೆ ಒಲೆಗಳ ಮೊರೆ ಹೋಗಿದ್ದು, ಸೌದೆ ಮೇಲೆಯೇ ಉಪಹಾರ, ಊಟ ತಯಾರಿಸುತ್ತಿದ್ದಾರೆ.

ಗ್ಯಾಸ್ ಸಿಲಿಂಡರ್ ಸಿಗದೇ 10-15 ಕ್ವಿಂಟಾಲ್ ಸೌದೆಯನ್ನು ಹೋಟೆಲ್ ಮಾಲೀಕರು ಸ್ಟಾಕ್ ಮಾಡಿಕೊಂಡಿದ್ದು, ಹೋಟೆಲ್ ಉದ್ಯಮ ಬಂದ್ ಮಾಡದೇ ಸೌದೆ ಬಳಸಿಕೊಂಡು ಉಪಹಾರ, ಊಟ ತಯಾರು ಮಾಡುತ್ತಿದ್ದಾರೆ.

ಗ್ಯಾಸ್ ಕಲೆಕ್ಷನ್ ಇದ್ದ ಒಲೆಗಳನ್ನು ಬಂದ್ ಮಾಡಿದ್ದು, ಎಲ್ಲವೂ ಸೌದೆ ಮಯವಾಗಿದೆ. ಸೌದೆ ಬಳಸಿಕೊಂಡು ಮಾಲೀಕರು ಅಡುಗೆ ಮಾಡಿಸುತ್ತಿದ್ದು, ಗ್ಯಾಸ್ ಹೆಚ್ಚು ಖರ್ಚಾಗುವ ಮೇನುಗಳನ್ನು ಬಂದ್ ಮಾಡಿದ್ದಾರೆ. ಚೈನೀಸ್ ಮೇನು, ಸೂಪ್‌ಗಳು, ದೋಸಾ ಸೇರಿದಂತೆ ಹೆಚ್ಚು ಗ್ಯಾಸ್ ಖರ್ಚಾಗುವ ಉಪಹಾರಗಳಿಗೆ ಬ್ರೇಕ್ ಹಾಕಿದ್ದಾರೆ.

 

 

error: Content is protected !!