ಪಾದಚಾರಿಗೆ ವಾಹನ ಢಿಕ್ಕಿ; ವ್ಯಕ್ತಿ ಸಾ*ವು

ಉಳ್ಳಾಲ: ಅಪರಿಚಿತ ವಾಹನ ಢಿಕ್ಕಿಯಾದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕುತ್ತಾರ್ ಸಮೀಪದ ಮದನಿ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮುನ್ದೋಳಿ ನಿವಾಸಿ ದಿನೇಶ್ ಗಟ್ಟಿ (50) ಮೃತ ದುರ್ದೈವಿ.

ಮಂಗಳವಾರ(ಮಾ.10) ರಾತ್ರಿ‌ ಅಂಗಡಿಗೆ ತೆರಳಿದ್ದ ದಿನೇಶ್ ಗಟ್ಟಿ ಅವರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಢಿಕ್ಕಿ ಹೊಡೆದು ಪರಾರಿ ಆಗಿದ್ದಾನೆ ಎನ್ನಲಾಗಿದೆ. ಅಪಘಾತದ ಪರಿಣಾಮ ಗಂಭೀರವಾಗಿ ಗಾಯಗೊಂಡ ದಿನೇಶ್ ಗಟ್ಟಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ(ಮಾ.11) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!