ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಐವರ ವಿರುದ್ಧ ಎಫ್‌ಐಆರ್

ಮಂಗಳೂರು: ಪದವು ಗ್ರಾಮದ ಶಕ್ತಿನಗರದಲ್ಲಿ ಇಸ್ಪಿಟ್ ಎಲೆಗಳನ್ನು ಬಳಸಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಕ್ತಿನಗರ ನಿವಾಸಿಗಳಾದ ಅರುಣ್ ಲೋಬೋ (49), ಸೆಬೆಸ್ಟಿಯನ್ ಲೋಬೋ (45), ಸ್ಟ್ಯಾನಿ ವಾಲ್ಟರ್ ಲೋಬೊ (50), ರವಿ ಕಿರಣ್ (35) ಮತ್ತು ಪಡುಶೆಡ್ಡೆ ಪಚ್ಚನಾಡಿ ನಿವಾಸಿ ಅಶೋಕ (40) ಬಂಧಿತ ಆರೋಪಿಗಳು.

ಬಂಧಿತರಿಂದ 4,200 ರೂ.ನಗದು ಮತ್ತು ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!