ಕೋಳಿ ಅಂಕಕ್ಕೆ ದಾಳಿ: ಎಂಟು ಮಂದಿ ಬಂಧನ

ಮಣಿಪಾಲ: ಕೋಳಿ ಅಂಕ ನಡೆಸುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ಭಾನುವಾರ(ಡಿ.7) ಮಂಚಿ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಜಯ ದೇವಾಡಿಗ, ದಯಾನಂದ ಪೂಜಾರಿ, ಪ್ರಜ್ವಲ್, ಅಚ್ಚಣ್ಣ ಮೂಲ್ಯ, ಸಚಿನ್, ಪ್ರದೀಪ್, ಅಮೀರ್, ಫಾರೂಕ್ ಅಹಮ್ಮದ್ ಬಂಧಿತ ಆರೋಪಿಗಳು.

ಆರೋಪಿಗಳಿಂದ 6500ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ 22100ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!