ಮೂಲ್ಕಿ: ದೈವಗಳಿಗೆ ಬಡಿಸಿದ ಅಗೇಲಿನ ಊಟ ಮಾಡುತ್ತಿದ್ದ ಮಹಿಳೆಗೆ ಕೋಳಿಯ ಮಾಂಸದ ತುಂಡು ಸಿಲುಕಿ ಆಕೆ ಒದ್ದಾಡಿದ ಘಟನೆ ಮೂಲ್ಕಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಮಹಿಳೆ ಅಗೇಲಿನ ಊಟ ಪ್ರಸಾದವನ್ನು ಗಬಗಬನೆಗ ನುಂಗುತ್ತಿದ್ದಾಗ ಅಚಾನಕ್ ಆಗಿ ಕೋಳಿ ಮಾಂಸದೊಂದಿಗೆ ಮೂಳೆಯನ್ನೂ ನುಂಗಿದ್ದಾರೆ. ಆದರೆ ಅದು ಗಂಟಲಿನಿಂದ ಇಳಿಯದೆ ಅಲ್ಲೇ ಜಾಂ ಆಗಿ ಮಹಿಳೆ ಒದ್ದಾಡುವಂತಾಯ್ತು. ಕೊನೆಗೆ ಅವರನ್ನು ಕಟೀಲಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಎಕ್ಸ್‌ರೇ ತೆಗೆದು ನೋಡಿದಾಗ ಮೂಳೆ ಗಂಟಲಿನಿಂದ ಜಾರಿ ಜಠರಕ್ಕೆ ಇಳಿಯದೆ ಮಧ್ಯದಲ್ಲಿಯೇ ಸಿಲುಕಿರುವುದು ಪತ್ತೆಯಾಯಿತು.
ಕೊನೆಗೆ ವೈದ್ಯರು ವೈಜ್ಞಾನಿಕ ಉಪಕರಣ ಹಾಗೂ ತಮ್ಮ ವೈದ್ಯ ಕೌಶಲ್ಯದಿಂದ ಎಲುಬನ್ನು ಯಶಸ್ವಿಯಾಗಿ ಹೊರತೆಗೆದು ಮಹಿಳೆಯನ್ನು ರಕ್ಷಿಸಿದ್ದಾರೆ.