ಸುರತ್ಕಲ್: ಭಕ್ತನ ಸೋಗಿನಲ್ಲಿ ದೇಗುಲಕ್ಕೆ ಬಂದ ಕಳ್ಳ ಹಣ ಎಗರಿಸಿ ಪರಾರಿ

ಸುರತ್ಕಲ್:‌ ಭಕ್ತನ ಸೋಗಿನಲ್ಲಿ ಬಂದ ಅಪರಿಚಿತನೋರ್ವ ಸುಮಾರು 40 ಸಾವಿರ ಹಣ ಎಗರಿಸಿ ಪರಾರಿಯಾದ ಘಟನೆ ಇಡ್ಯಾ ಶ್ರೀ ಮಹಾಲಿಂಗೇಶ್ವರದಲ್ಲಿ ಶನಿವಾರ ಸಂಜೆ ನಡೆದಿದೆ. ಕಳ್ಳನ ಕೃತ್ಯ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ದೇಗುಲದ ಒಳಗಡೆ ಎಂಟ್ರಿಯಾದ ಕಳ್ಳ ಭಕ್ತನಂತೆಯೇ ನಟನೆ ಮಾಡಿ, ಬ್ಯಾಗಿನ ಪಕ್ಕದಲ್ಲಿಯೇ ನಿಂತು ಅದರಲ್ಲಿಟ್ಟಿದ್ದ ಬ್ಯಾಗಿನಿಂದ 40000 ಹಣ ಎಗರಿಸಿ ದಿಢೀರ್‌ ಎಸ್ಕೇಪ್‌ ಆಗಿರುವುದು ದೃಶ್ಯದಲ್ಲಿ ದಾಖಲಾಗಿದೆ. ಹಣ ಕಳೆದುಕೊಂಡ ವ್ಯಕ್ತಿ ಸುರತ್ಕಲ್‌ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಫುಟೇಜ್‌ ಆಧಾರದಲ್ಲಿ ಕಳ್ಳನ ತಲಾಶೆ ಆರಂಭಿಸಿದ್ದಾರೆ.

error: Content is protected !!