ಈ ಅಭ್ಯಾಸ ತಕ್ಷಣ ನಿಲ್ಲಿಸಿ! ಶಬರಿಮಲೆ ಯಾತ್ರಿಕರಿಗೆ ಖಡಕ್ ಎಚ್ಚರಿಕೆ

ಶಬರಿಮಲೆ: ಯಾತ್ರಿಕರು ಶಬರಿಮಲೆ ಕಾಡಿನಲ್ಲಿ ಕಾಡುಪ್ರಾಣಿಗಳ ಸುರಕ್ಷತೆ ಮತ್ತು ಯಾತ್ರಿಕರ ಭದ್ರತೆಯನ್ನು ಗಮನದಲ್ಲಿಟ್ಟು ಅರಣ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಯಾತ್ರೆ ಮಾರ್ಗದುದ್ದಕ್ಕೂ “ಕಾಡುಪ್ರಾಣಿಗಳಿಗೆ ಆಹಾರ ನೀಡಬೇಡಿ” ಎಂಬ ಸೂಚನಾ ಫಲಕಗಳನ್ನು ಅಳವಡಿಸಿ, ಯಾತ್ರಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಅಧಿಕಾರಿಗಳ ಪ್ರಕಾರ, ಕಾಡುಪ್ರಾಣಿಗಳಿಗೆ ಕೈಯಾರೆ ಆಹಾರ ನೀಡುವುದರಿಂದ ಅವುಗಳು ಸ್ವತಃ ಆಹಾರ ಅರಸುವುದನ್ನು ನಿಲ್ಲಿಸಿ ಮನುಷ್ಯರು ಕೊಡುವ ಆಹಾರವನ್ನಷ್ಟೇ ಅಭ್ಯಾಸಗೊಳಿಸುತ್ತದೆ ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ ಅವು ಆಕ್ರಮಣಕಾರಿಯಾಗುವ ಅಪಾಯವಿದೆ. ವಿಶೇಷವಾಗಿ ಮಕಾಕ್ಸ್, ಕಾಡುಕುರಿ ಹಾಗೂ ಕಾಡುಪಂದಿ ಪ್ರಭೇದಗಳು ಆಹಾರಕ್ಕಾಗಿ ಯಾತ್ರಿಕರತ್ತ ದಾಳಿ ನಡೆಸುವ ಘಟನೆಗಳು ಹಿಂದೆ ದಾಖಲಾಗಿವೆ.

ಇದೇ ಸಂದರ್ಭದಲ್ಲಿ, ಅಧಿಕಾರಿಗಳು ಆಹಾರ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಪ್ಯಾಕೇಜಿಂಗ್‌ಗಳನ್ನು ಮಾರ್ಗದ ಮೇಲೆ ನಿರ್ಲಕ್ಷ್ಯವಾಗಿ ಎಸೆಯಬಾರದು, ಇದು ಪರಿಸರ ವ್ಯವಸ್ಥೆಗೆ ಗಂಭೀರ ಹಾನಿ ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ. ಪ್ಲಾಸ್ಟಿಕ್ ಕವರ್‌ಗಳನ್ನು ತಿಂದ ಕಾಡುಪ್ರಾಣಿಗಳ ಸಾವುಗಳು ಅರಣ್ಯ ಇಲಾಖೆಗೆ ದೊಡ್ಡ ಚಿಂತೆಯಾಗಿದೆ.

“ಯಾತ್ರಿಕರು ತಮ್ಮ ಆಹಾರ ತ್ಯಾಜ್ಯವನ್ನು ನಿಗದಿತ ತ್ಯಾಜ್ಯ ತೊಟ್ಟಿಗಳಲ್ಲಿ ಮಾತ್ರ ವಿಸರ್ಜಿಸಬೇಕು. ಮಾರ್ಗದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳು, ಕವರ್‌ಗಳು, ಎಸೆಯುವ ಪ್ರವೃತ್ತಿ ನಿಲ್ಲಿಸಬೇಕು. ಇದು ಪರಿಸರ ಸಂರಕ್ಷಣೆಗೂ, ಪ್ರಾಣಿಗಳ ಜೀವ ರಕ್ಷಣೆಗೂ ಅಗತ್ಯ,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶಬರಿಮಲೆ ಯಾತ್ರೆಯಲ್ಲಿ ವರ್ಷಾವರ್ಷವೂ ಹೆಚ್ಚುತ್ತಿರುವ ಜನಸಂಚಾರವನ್ನು ಗಮನದಲ್ಲಿಟ್ಟುಕೊಂಡು, ಕಾಡು–ಮಾನವ ಸಂಘರ್ಷ ತಡೆಯಲು ಈ ನಿಯಮಗಳು ಕಡ್ಡಾಯವಾಗಿ ಪಾಲನೆಗೊಳಿಸಬೇಕು ಎಂದು ಇಲಾಖೆಯು ಮನವಿ ಮಾಡಿದೆ.

error: Content is protected !!