Bigg Boss Kannada 12ರಲ್ಲಿ ಈ ವಾರ ಎಲಿಮಿನೇಶನ್ ಹಂತದಲ್ಲಿರುವ ಒಂಬತ್ತು ಸ್ಪರ್ಧಿಗಳ ಭವಿಷ್ಯ ಆನ್‌ಲೈನ್ ಮತದಾನದ ಮೇಲೆ ಅವಲಂಬಿತವಾಗಿದೆ. ಡಿಸೆಂಬರ್ 7, ಭಾನುವಾರ ಹೊರಗೆ ಬರುವವರು ಯಾರು ಎಂದು ನಿರ್ಧಾರವಾಗಲಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲಿ ಮತದಾನ ಜೋರಾಗಿದೆ.

ಕಾರ್ಯಕ್ರಮದ ಈ ಹಂತದಲ್ಲಿ ನಾಮಿನೇಷನ್ ಪ್ರಕ್ರಿಯೆಯ ಮಹತ್ವ ಹೆಚ್ಚಾಗಿರುವುದರಿಂದ ಮನೆಯೊಳಗಿನಿಂದ ಈ ಬಾರಿ ಒಬ್ಬರು ಹೊರಹೋಗುವುದಂತೂ ಗ್ಯಾರಂಟಿ. ಈವರೆಗೆಗಿನ ವೋಟಿಂಗ್ ಲೆಕ್ಕಾಚಾರದ ಪ್ರಕಾರ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ಧ್ರುವಂತ್ ಎಲ್ಲರಿಗಿಂತ ಕಡಿಮೆ ವೋಟ್ ಪಡೆದಿದ್ದು, ಈ ಬಾರಿ ಅವರು ಮನೆಗೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪರ್ಧಿಗಳಿಂದ ಟೀಕೆಗೆ ಗುರಿಯಾಗಿರುವ ಗಿಲ್ಲಿ ನಟ್ಟಾ ಈ ವಾರದ ಬಹುಜನಪ್ರಿಯ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಪರದೆಯಲ್ಲಿ ಅವರ ಡಿಫೆರೆಂಟ್ ಮ್ಯಾನರಿಸಂ, ಕೋಪಿಸಿಕೊಳ್ಳದೇ ಇರುವುದು, ಚರ್ಚೆಗಳಲ್ಲಿ ಭಾಗವಹಿಸುವಿಕೆ, ಬುದ್ಧಿಮಾತು, ಬೈಯ್ಗುಳವನ್ನು ಸ್ವೀಕರಿಸುವ ರೀತಿ ಇವೆಲ್ಲವೂ ವೀಕ್ಷಕರ ಮನಸೆಳೆದಿದೆ ಎಂದು ಹೇಳಲಾಗುತ್ತಿದೆ.
ಇನ್ನು ಪುಟಾಣಿ ಹುಡುಗಿ ರಕ್ಷಿತಾ ಮಲ್ಲುಗೆ ಬಕೆಟ್ ಹಿಡಿಯುತ್ತಿರುವಂತೆ ಅನಿಸಿದರೂ ಆಕೆಯ ಮುದ್ದು ಆಟ ವೀಕ್ಷಕರಿಗೆ ಹಿಡಿಸಿದೆ. ಮುಂಬೈ ತುಳುವರು ಹಾಗೂ ತುಳುನಾಡು ಜನತೆ ಆಕೆಯ ಕೈ ಹಿಡಿದಿರುವುದರಿಂದ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದು, ಈ ಬಾರಿ ನಾಮಿನೇಷನ್‌ನಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಡೇಂಜರ್ ಝೋನ್‌ನಲ್ಲಿ ಧ್ರುವಂತ್- ಮಲ್ಲು
10ನೇ ವಾರದ ನಾಮಿನೇಷನ್ ಆಗಿ ಸೂರಜ್, ಮಾಲು, ಸ್ಪಂದನ, ರಸಿಕಾ ಶೆಟ್ಟಿ, ಧ್ರುವಂತ್, ಕಾವ್ಯ, ಅಭಿಷೇಕ್, ರಕ್ಷಿತಾ ಹಾಗೂ ಗಿಲ್ಲಿ ನಟ್ಟಾ ಎಂಬ ಒಂಬತ್ತು ಪ್ರಮುಖ ಸ್ಪರ್ಧಿಗಳಿದ್ದಾರೆ. ಈ ಪೈಕಿ ಇದುವರೆಗೆ ಧ್ರುವಂತ್ ಕಡಿಮೆ ವೋಟಿಂಗ್ ಪಡೆದಿದ್ದು, ಅದಕ್ಕಿಂತ ಕೊಂಚ ಹೆಚ್ಚು ಮಾಲು ಪಡೆದಿದ್ದಾರೆ. ಇವರಿಬ್ಬರಿಗಿಂತ ಅಶ್ವಿನಿ ಕೊಂಚ ಹೆಚ್ಚು ವೋಟ್ ಪಡೆದಿದ್ದಾರೆ. ವೋಟಿಂಗ್ ಲೈನ್ ಚಾಲನೆಯಲ್ಲಿದ್ದು, ಅಂತಿಮವಾಗಿ ಯಾರು ಹೊರಗಡೆ ಹೋಗುತ್ತಾರೆ ಎನ್ನುವುದು ಕುತೂಹಲವಿದೆ. ವೋಟಿಂಗ್ ಲೈನ್ ಹೀಗೆಯೇ ಮುಂದುವರಿದರೆ ಧ್ರುವಂತ್‌ಗೆ ನಾಳಿನ ಭಾನುವಾರ ಬಿಗ್‌ಬಾಸ್ ಮನೆಯಲ್ಲಿ ಕೊನೆಯ ದಿನವಾಗಲಿದೆ.
/newsfirstprime/media/media_files/2025/09/29/malu-nipanala-2025-09-29-13-31-45.webp)
ಕಿಚ್ಚ ಸುದೀಪ್ ನಡೆಸಿಕೊಡುವ ಈ ಶೋದಲ್ಲಿ ಪ್ರತಿ ವಾರವೂ ಹೊಸ ತಿರುವುಗಳು ಕಾಣಿಸಿಕೊಳ್ಳುತ್ತಿದ್ದು, 12ನೇ ಸೀಸನ್ ತನ್ನ ನಾಟಕೀಯ ಹೈಲೈಟ್‌ಗಳೊಂದಿಗೆ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ.
