ಕಾಪು: ಎರ್ಮಾಲ್ ತೆಂಕದ ಬಳಿ ಕೋಟೇಶ್ವರದಿಂದ ಪಡುಬಿದ್ರೆಗೆ ಅಕ್ಕಿ ತುಂಬಿಸಿಕೊಂಡು ಹೋಗುತ್ತಿದ್ದ ಟೆಂಪೋವೊಂದರ ಟೈಯರ್ ಸ್ಫೋಟಗೊಂಡ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಸ್ತೆಗೆ ಮಗುಚಿ ಬಿದ್ದ ಘಟನೆ ಇಂದು(ಡಿ.4) ನಡೆದಿದೆ.

ಘಟನೆಯ ಸಂದರ್ಭ, ಆಪತ್ಬಾಂಧವ ಖ್ಯಾತಿಯ ಸಮಾಜ ಸೇವಕ ಜಲಾಲುದ್ದೀನ್ ಜಲ್ಲು ಉಚ್ಚಿಲ, ಜುನೈದ್ ಎರ್ಮಾಲ್, ಹಮೀದ್ ಉಚ್ಚಿಲ, ಎಸ್.ಡಿ.ಪಿ.ಐ. ಉಚ್ಚಿಲ ಆಂಬುಲೆನ್ಸ್ ಚಾಲಕ ಅಬೂಬಕರ್ ಸಿದ್ದೀಕ್ ಹಾಗೂ ಎರ್ಮಾಳು ರಿಕ್ಷಾ ಚಾಲಕರ ಸಹಕಾರದೊಂದಿಗೆ ಟೆಂಪೋದಲ್ಲಿದ್ದ ಅಕ್ಕಿಯನ್ನು ಸುರಕ್ಷಿತವಾಗಿ ಖಾಲಿ ಮಾಡಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಯಿತು.

ಎನ್.ಎಚ್.ಎ.ಐ. ಸಿಬ್ಬಂದಿಗಳು ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೂಡ ಕಾರ್ಯದಲ್ಲಿ ಸಹಕರಿಸಿದ್ದರು.