ಮಂಗಳೂರಿನಲ್ಲಿ ಭಾರತದ ಪ್ರಾಚೀನ ನಾಣ್ಯಗಳ ಮಹಾಪ್ರದರ್ಶನ: ಉಚಿತ ಪ್ರವೇಶ

ಮಂಗಳೂರು: THE ANCIENT TIMES ವತಿಯಿಂದ “COIN SHOW INDIA–2025” ಇದರ 5ನೇ ಪ್ರದರ್ಶನ ಮಂಗಳೂರಿನಲ್ಲಿ ಡಿಸೆಂಬರ್ 5, 6, 7 (3 ದಿನ), ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ, ಮಂಗಳ ಹಾಲ್, ಹೋಟೆಲ್ ಶ್ರೀನಿವಾಸ, ಜಿಎಚ್‌ಎಸ್ ರಸ್ತೆ, ಮಂಗಳೂರು ಇಲ್ಲಿ ನಡೆಯಲಿದೆ. ಈ ಪ್ರದರ್ಶನದಲ್ಲಿ ಭಾರತದ ಪ್ರಾಚೀನ ನಾಣ್ಯಗಳಿಂದ ಹಿಡಿದು ಗಣರಾಜ್ಯ ಭಾರತದ ನಾಣ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಕ್ರಿ.ಶ. 2 ರಿಂದ ಆರಂಭವಾಗಿ, ರಾಜರಾಜ ಚೋಳ, ಚೇರ, ಚೋಳ, ಪಾಂಡ್ಯ ವಂಶ, ವಿನಾಯಗರ ಸಾಮ್ರಾಜ್ಯ, ಮೈಸೂರು ಒಡೆಯರ್ ಕಾಲದ, ಈಸ್ಟ್ ಇಂಡಿಯಾ ಕಂಪನಿ, ಡಚ್ ಇಂಡಿಯಾ, ಫ್ರೆಂಚ್ ಇಂಡಿಯಾ, ಪ್ರಿನ್ಸ್ಲಿ ಸ್ಟೇಟ್ಸ್ ಆಫ್ ಇಂಡಿಯಾ— ಇವುಗಳ ಬೆಳ್ಳಿ, ಬಂಗಾರ, ತಾಮ್ರ ನಾಣ್ಯಗಳು ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆ.

ಅದೇ ರೀತಿ, ಬ್ರಿಟಿಷ್ ಇಂಡಿಯಾ ನಾಣ್ಯಗಳು, ವಿಕ್ಟೋರಿಯಾ ರಾಣಿ, ರಾಣಿ ಎಲಿಜಬೆತ್–II, ಕಿಂಗ್ ಜಾರ್ಜ್, ಕಿಂಗ್ ಎಡ್ವರ್ಡ್ ಅವರ ಕಾಲದ ನಾಣ್ಯಗಳು, ಯುದ್ಧ ಪದಕಗಳು, ಅಂಚೆ ಚೀಟಿಗಳು, ಪದಕಗಳು ಕೂಡ ಪ್ರದರ್ಶನದಲ್ಲಿರುತ್ತವೆ. ಜೊತೆಗೆ ಪ್ರಾಚೀನ ವಸ್ತುಗಳು, ವಿಂಟೇಜ್ ಸಂಗ್ರಹಗಳು, ಹಳೆಯ ಪೆನ್ನ್, ಶೋ ಪೀಸ್‌ಗಳು ಕೂಡ ಲಭ್ಯವಿದೆ.

ಈ ಪ್ರದರ್ಶನಕ್ಕೆ ಭಾರತದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಡೀಲರ್‌ಗಳು ಭಾಗವಹಿಸಲಿದ್ದಾರೆ. ನಿಮ್ಮ ಬಳಿ ಇಂತಹ ನಾಣ್ಯಗಳು ಅಥವಾ ವಸ್ತುಗಳಿದ್ದರೆ, 30 ವರ್ಷಗಳ ಅನುಭವ ಹೊಂದಿರುವ ಮಲಯಾಳಸಾಮಿ (Antiquarian) ಅವರಿಂದ ಉಚಿತ ಮೌಲ್ಯಮಾಪನ ಸೇವೆ ಲಭ್ಯ.

error: Content is protected !!