ಮುಂಬೈ: ಬಾಲಿವುಡ್ ನಟಿ ದಿಷಾ ಪಟಾನಿ ತನ್ನ ಇತ್ತೀಚಿನ ಫೋಟೋ ಶೂಟ್ ಮೂಲಕ ಮತ್ತೆ ಫ್ಯಾಷನ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಈ ಬಾರಿ ಬ್ಲ್ಯಾಕ್ ಬಣ್ಣದ ಗೌನ್ ಧರಿಸಿ ಮಾದಕ ನೋಟ ಬೀರಿದ್ದಾರೆ.

ದಿಷಾ ತಮ್ಮ ಫ್ಯಾಷನ್ ಆಯ್ಕೆಯಲ್ಲಿ ಸರಳತೆಯನ್ನು ಮೆಚ್ಚಿಸುತ್ತಾರೆ. ಇತ್ತೀಚಿನ ಲುಕ್‌ನಲ್ಲಿ ಅವರು ಕಪ್ಪು ಬಣ್ಣದ ದಿರಿಸಿನಲ್ಲಿ ತಮ್ಮ ಸ್ವಾಭಾವಿಕ ಸೌಂದರ್ಯವನ್ನು ತೋರಿಸಿದ್ದಾರೆ ಜೊತೆಗೆ ಹೆಚ್ಚೇನು ಅಲಂಕಾರ ಮಾಡಿಲ್ಲ. ಡೀಪ್ ನೆಕ್‌ಲೈನ್ ಅವರನ್ನು ಇನ್ನಷ್ಟು ಕ್ಯೂಟ್ ಆಗಿಸಿದೆ.

ಮೇಕಪ್ ನಯವಾದರೂ ಸ್ಪಷ್ಟವಾಗಿದೆ: ಸ್ಮೋಕಿ ಐಸ್, ಚೆನ್ನಾಗಿ ರೂಪುಗೊಂಡ ಭ್ರೌಸ್ ಮತ್ತು ನ್ಯೂಡ್ ಲಿಪ್ಸ್ ಅವರ ನೈಸರ್ಗಿಕ ಅಂದವನ್ನು ಹೆಚ್ಚಿಸುತ್ತವೆ. ಕನಿಷ್ಟ ಆಕ್ಸೆಸರಿ ಬಳಸಿದ್ದರೂ ಅವರು ತಮ್ಮ ಗಮನವನ್ನು ವ್ಯಕ್ತಿತ್ವ, ಭಾವನೆ ಮತ್ತು ಸ್ಥಿತಿಯ ಮೇಲೆ ಕೆಂದ್ರೀಕರಿಸಿದ್ದಾರೆ..

ಪ್ರತಿ ಶಾಟ್‌ನಲ್ಲಿ ದಿಷಾ ವಿಭಿನ್ನ ಭಾವವನ್ನು ತೋರಿಸುತ್ತಾರೆ — ಸೆಕ್ಸಿ, ಶಾಂತ, ಕೋಪಿಷ್ಟ, ಅಥವಾ ಚಿಂತೆ ರಹಿತ ಶೂನ್ಯ ನೋಟ. ದಿಷಾ ಸರಳ, ಸರಳ ಶೈಲಿಯನ್ನು ಮೆಚ್ಚುತ್ತಾರೆ. ಕಪ್ಪು ಡ್ರೆಸ್ ಬಹಳ ಮಿನಿಮಲಿಸ್ಟ್ ಆಗಿದೆ, ಆದರೆ ನಿಖರವಾದ ಡಿಸೈನ್ ಅಂದವಾಗಿ ಮೂಡಿಬಂದಿದೆ.

ಕೆಲವು ಫೋಟೋಗಳಲ್ಲಿ ಬೋಲ್ಡಾಗಿ ಕಾಣಿಸಿಕೊಂಡರೂ ಅವರ ಮುಖದಲ್ಲಿರುವ ಭಾವವನ್ನು ನೋಡಿದರೆ ಶಿಲ್ಪಿಯು ಕೆತ್ತಿದ ವಿಗ್ರಹದಂತಿದೆ. ಎಳೆ ಹುಡುಗಿಯರಿಗೂ ಚಮ್ಮಕ್ ಕೊಡುವಷ್ಟು ಅಂದವಾಗಿ ಕಾಣಿಸಿರುವ ದಿಷಾ ಪಟಾಣಿ ಹುಡುಗಿಯರಿಗೆ ಹೊಟ್ಟೆಕಿಚ್ಚಾಗುವಂತೆ ಮಾಡಿದ್ದಾರೆ.

ಈ ಫೋಟೋಗಳು ದಿಷಾ ಕೇವಲ ಸ್ಟೈಲಿಶ್ ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದಿರುವ ಪ್ರಭಾವಶಾಲಿ ಹೆಣ್ಣು ಎಂದು ತೋರಿಸಿಕೊಟ್ಟಿದ್ದಾರೆ.
