ಉಡುಪಿ: ಜಿಲ್ಲೆಯ ಕಲ್ಮಾಡಿಯ ಯುವಕನೊರ್ವ ಮುಂಬೈನ ಥಾಣೆಯಲ್ಲಿ ಶುಕ್ರವಾರ(ನ.21) ತಡರಾತ್ರಿ ಸಂಭವಿಸಿದ ಬೈಕ್ ಅಪಘಾತಕ್ಕೀಡಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಉಡುಪಿಯ ಕಲ್ಮಾಡಿಯ ನಿವಾಸಿ ಇನಿಶ್ ಲಸ್ರಾದೊ(25) ಮೃತ ಯುವಕ.

ಇನಿಶ್ ಅವರು ಕಳೆದ ಮೂರು ವರ್ಷಗಳಿಂದ ಥಾಣೆಯಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್‌ನ ಐಸಿವೈಎಂ ಘಟಕದಲ್ಲಿ ಮತ್ತು ಚರ್ಚ್‌ನ ವಿವಿಧ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು.