ವೈಮಾನಿಕ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ ಹತ್ಯೆ!? ವಿಶ್ವವೇ ಬೆಚ್ಚಿಬಿದ್ದ ಆ ಕಗ್ಗತ್ತಲ ರಾತ್ರಿಯ ಕಥೆ

ತೆಹ್ರಾನ್: ಇತ್ತೀಚಿನ ದಶಕಗಳಲ್ಲೇ ಕಂಡರಿಯದ ಅತಿದೊಡ್ಡ ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಹತ್ಯೆಯಾಗಿದ್ದಾರೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ಈ ಭೀಕರ ವಾಯುದಾಳಿಯನ್ನು ಇರಾನ್‌ನ ಸರ್ಕಾರಿ ಮಾಧ್ಯಮಗಳು ಭಾನುವಾರ ಬೆಳಿಗ್ಗೆ ಅಧಿಕೃತವಾಗಿ ಖಚಿತಪಡಿಸಿವೆ.

ಮಿಷನ್ “ಡೆಡ್ಲಿ ಸೈಲೆನ್ಸ್” – ಖಮೇನಿ ಯುಗಕ್ಕೆ ಅಂತ್ಯ ಹಾಡಿದ ಆ 60 ನಿಮಿಷಗಳು!

ಸ್ಥಳ: ತೆಹ್ರಾನ್, ಇರಾನ್.
ಸಮಯ: ಶನಿವಾರ ಮುಂಜಾನೆ, ಕಗ್ಗತ್ತಲ ರಾತ್ರಿ.

ನಗರವೆಲ್ಲ ನಿದ್ರಿಸುತ್ತಿತ್ತು. ಆದರೆ ಆಕಾಶದಲ್ಲಿ ಸಾವು ಹರಿದಾಡುತ್ತಿತ್ತು. ಅಮೆರಿಕದ ಅತ್ಯಾಧುನಿಕ B-2 ಸ್ಟೆಲ್ತ್ ಬಾಂಬರ್‌ಗಳು ಮತ್ತು ಇಸ್ರೇಲ್‌ನ F-35 ಯುದ್ಧ ವಿಮಾನಗಳು ರೇಡಾರ್‌ಗಳ ಕಣ್ಣು ತಪ್ಪಿಸಿ ಇರಾನ್‌ನ ವಾಯುಗಡಿಯನ್ನು ಸದ್ದಿಲ್ಲದೆ ಪ್ರವೇಶಿಸಿದ್ದವು. ಗುರಿ ಸ್ಪಷ್ಟವಾಗಿತ್ತು: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಭದ್ರಕೋಟೆ!

ಪತ್ತೆ ಹಚ್ಚಿದ್ದು ಹೇಗೆ?
ಟ್ರಂಪ್ ಅವರ ಪೋಸ್ಟ್ ಪ್ರಕಾರ, ಅಮೆರಿಕದ ಗುಪ್ತಚರ ಸಂಸ್ಥೆಗಳು ತಿಂಗಳುಗಳಿಂದ ಖಮೇನಿಯ ಪ್ರತಿ ನಡಿಗೆಯನ್ನು ಗಮನಿಸುತ್ತಿದ್ದವು. ಅವರು ಬಳಸುತ್ತಿದ್ದ ಸ್ಯಾಟಲೈಟ್ ಫೋನ್ ಅಥವಾ ಕಚೇರಿಯ ಒಳಗಿನ ಯಾವುದೋ ಒಂದು ‘ಗುಪ್ತ ಮಾಹಿತಿ’ (Intelligence leak) ಅವರ ಸಾವಿಗೆ ಮುನ್ನುಡಿ ಬರೆಯಿತು. “ಅವರು ಎಲ್ಲಿಗೆ ಹೋದರೂ ನಮಗೆ ತಿಳಿಯುತ್ತಿತ್ತು, ಅವರಿಗೆ ತಪ್ಪಿಸಿಕೊಳ್ಳಲು ದಾರಿಯೇ ಇರಲಿಲ್ಲ” ಎಂಬ ಟ್ರಂಪ್ ಮಾತುಗಳು ಈ ಕಾರ್ಯಾಚರಣೆಯ ನಿಖರತೆಯನ್ನು ಸಾರುತ್ತವೆ.

ಆ ಕಗ್ಗತ್ತಲ ರಾತ್ರಿಯ ಅಬ್ಬರ!
ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ತೆಹ್ರಾನ್‌ನ ಆಕಾಶದಲ್ಲಿ ಬೆಂಕಿಯ ಉಂಡೆಗಳು ಕಂಡವು. ಖಮೇನಿ ಅವರ ಕಚೇರಿಯ ಮೇಲೆ ನಿಖರವಾದ ಕ್ಷಿಪಣಿಗಳು ಅಪ್ಪಳಿಸಿದವು. ಇಡೀ ಕಟ್ಟಡ ಕ್ಷಣಾರ್ಧದಲ್ಲಿ ಧೂಳೀಪಟವಾಯಿತು.

ಖಮೇನಿ ಅವರ ಜೊತೆಗಿದ್ದ ರಕ್ಷಣಾ ಸಚಿವ ನಾಸಿರ್ಜಾದೆ ಮತ್ತು IRGC ಕಮಾಂಡರ್ ಪಾಕ್ಪೋರ್ ಕೂಡ ಈ ‘ಡೆತ್ ಟ್ರ್ಯಾಪ್’ನಿಂದ ಪಾರಾಗಲು ಸಾಧ್ಯವಾಗಲಿಲ್ಲ.

ಸಾಕ್ಷ್ಯಗಳು ಮತ್ತು ರಹಸ್ಯಗಳು:
ಇಸ್ರೇಲ್‌ನ ಚಾನಲ್ 12 ವರದಿಯ ಪ್ರಕಾರ, ಪ್ರಧಾನಿ ನೆತನ್ಯಾಹು ಅವರಿಗೆ ಖಮೇನಿಯ ಮೃತದೇಹದ ಫೋಟೋವನ್ನು ತೋರಿಸಲಾಗಿದೆ. ಇದು ಕೇವಲ ದಾಳಿಯಲ್ಲ, ಶತ್ರು ರಾಷ್ಟ್ರದ ನಾಯಕನ ಅಸ್ತಿತ್ವವನ್ನೇ ಅಳಿಸಿ ಹಾಕಿದ ‘ಮಾಸ್ಟರ್ ಪ್ಲಾನ್’.

ಆದರೆ, ಟ್ವಿಸ್ಟ್ ಇಲ್ಲಿದೆ! ಖಮೇನಿ ಸತ್ತಿದ್ದಾರೆ ಎಂದು ಒಂದು ಕಡೆ ಸುದ್ದಿಯಾಗುತ್ತಿದ್ದರೆ, ಅವರ ಅಧಿಕೃತ ಎಕ್ಸ್ (X) ಖಾತೆಯಿಂದ “ನಾಮಿ ಹೈದರ್ ಹೆಸರಿನಲ್ಲಿ” ಎಂಬ ನಿಗೂಢ ಸಂದೇಶ ಪೋಸ್ಟ್ ಆಗಿದೆ. ಇದು ಇರಾನ್‌ನ ತಪ್ಪು ಮಾಹಿತಿ ಹರಡುವ ತಂತ್ರವೇ ಅಥವಾ ಖಮೇನಿ ಪವಾಡಸದೃಶವಾಗಿ ಬಚಾವಾಗಿದ್ದಾರೆಯೇ? ಎಂಬುದು ಇನ್ನೂ ನಿಗೂಢ‌

ವರದಿ ಅಧಿಕೃತವಾಗಿಲ್ಲದಿದ್ದರೂ, ಇದನ್ನು ಇತಿಹಾಸದ ಅತಿದೊಡ್ಡ ‘ಜಂಟಿ ಬೇಟೆ’ ಎನ್ನಲಾಗುತ್ತಿದೆ.

ಕೇವಲ ಖಮೇನಿ ಮಾತ್ರವಲ್ಲ, ಅವರ ಕುಟುಂಬದ ಐವರು ಸದಸ್ಯರು ಮತ್ತು ಉನ್ನತ ಸೇನಾ ಕಮಾಂಡರ್‌ಗಳು ಸಮಾಧಿಯಾಗಿದ್ದಾರೆ ಎನ್ನಲಾಗುತ್ತಿದೆ. ಇರಾನ್ ಈಗ ‘ಗಾಯಗೊಂಡ ಹಾವಿನಂತೆ’ ಆವೇಶದಲ್ಲಿದೆ.

error: Content is protected !!