ಪಡುಪಣಂಬೂರು ಕೇಂದ್ರದಲ್ಲಿ ಡಿಜಿಪೇ ಕಾರ್ಯಕ್ರಮಕ್ಕೆ ಚಾಲನೆ

ಮೂಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ – ಬಜಪೆ ಘಟಕದ ಮೂಲ್ಕಿ ವಲಯ ವ್ಯಾಪ್ತಿಯ ಪಡುಪಣಂಬೂರು ಕೇಂದ್ರದಲ್ಲಿ ಡಿಜಿಪೇ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅರಸು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೌತಮ್ ಜೈನ್, ಮೂಲ್ಕಿ ವಲಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಧ್ಯ, ಒಕ್ಕೂಟದ ಮಾಜಿ ಅಧ್ಯಕ್ಷ ಕರುಣಾಕರ, ವಲಯ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ತಾಲ್ಲೂಕು ನೋಡಲ್ ಅಧಿಕಾರಿ, ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಡಿಜಿಪೇ ಸೇವೆಯ ಉದ್ಘಾಟನೆಯೊಂದಿಗೆ ವಲಯದ ಮಹಿಳಾ ಸಂಘಗಳಿಗೆ ಡಿಜಿಟಲ್ ವ್ಯವಹಾರ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಸುಲಭಗೊಳಿಸುವ ಹೊಸ ಹಂತ ಆರಂಭವಾಗಿದೆ ಎಂದು ಕಾರ್ಯಕ್ರಮದಲ್ಲಿ ತೋಳಬಲ ವ್ಯಕ್ತವಾಯಿತು.

error: Content is protected !!