ಹಳೆಯಂಗಡಿ: ಬಜಪೆ ತಾಲ್ಲೂಕಿನ ಮುಲ್ಕಿ ವಲಯ ವ್ಯಾಪ್ತಿಯ ಹಳೆಯಂಗಡಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಡಿಜಿಪೇ ಕಾರ್ಯಕ್ರಮಕ್ಕೆ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಬ್ಯಾಂಕ್ ಅಧ್ಯಕ್ಷ ವಸಂತ್ ಬೇರ್ನಾಡ್, ಪಿ.ಸಿ.ಎ ಬ್ಯಾಂಕ್ ಸದಸ್ಯ ಧರ್ಮಾನಂದ್ ಶೆಟ್ಟಿಗಾರ್, ವಲಯ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ತಾಲ್ಲೂಕು ನೋಡಲ್ ಅಧಿಕಾರಿ, ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.