ಉಡುಪಿ: ಬೆಂಗಳೂರು ಬಸವೇಶ್ವರ ನಗರದಲ್ಲಿರುವ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷದ ಒಳಗಿನ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಮಣಿಶ್ರೀ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ವಿಜೇತ ತಂಡದ ಸದಸ್ಯೆಯಾಗಿದ್ದಾರೆ.


ರಾಜ್ಯ ಮಟ್ಟದಲ್ಲಿ ತೋರಿದ ಶ್ರೇಷ್ಠ ಪ್ರದರ್ಶನದ ಆಧಾರದ ಮೇಲೆ ಮಣಿಶ್ರೀ ಅವರು ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಣಿಶ್ರೀ ಅವರು ಮೈರ್ಲೊಟ್ಟೆಯ ಈಶ್ವರ ಮೂಲ್ಯರ ಮೊಮ್ಮಗಳು ಹಾಗೂ ಮಠದಕೆರೆ ಇನ್ನಾ ಮಲ್ಲಿಕಾ–ಸುಧಾಕರ್ ದಂಪತಿಯ ಪುತ್ರಿ. ಕಬಡ್ಡಿಯಲ್ಲಿ ತಮ್ಮ ಸಾಮರ್ಥ್ಯವನ್ನು ಬೆಳೆಸಲು ದೈಹಿಕ ಶಿಕ್ಷಕರಾದ ಸತೀಶ್ ಸುವರ್ಣ ಮತ್ತು ಯತಿನ್ ಬಂಗೇರ ಅವರಿಂದ ತರಬೇತಿ ಪಡೆದಿದ್ದಾರೆ.
