ಮಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಸೆಪ್ಟೆಂಬರ್‌ನಲ್ಲಿ ಅಂತ್ಯ ಕಂಡ ಎರಡನೇ ತ್ರೈಮಾಸಿಕ ಅವಧಿ ಲಾಭದಲ್ಲಿ ಶೇ.8ರಷ್ಟು ಕುಸಿತ ಕಂಡಿದೆ. ಬಡ್ಡಿ ಆದಾಯವು ಮಧ್ಯಮ ಮಟ್ಟದಲ್ಲಿರುವುದು ಇದಕ್ಕೆ ಕಾರಣ. ಪರಿಣಾಮ ಕಳೆದ ವರ್ಷ ಇದೇ ಅವಧಿಯಲ್ಲಿ 5238 ಕೋಟಿ ರು.ಗಳಷ್ಟಿದ್ದ ನಿವ್ವಳ ಲಾಭ 4809 ಕೋಟಿ ರು.ಗೆ ತಲುಪಿದೆ.

ಇನ್ನು ಬ್ಯಾಂಕ್ ಆಫ್ ಬರೋಡಾದ ಒಟ್ಟು ಆದಾಯದಲ್ಲಿಯೂ ಕುಸಿತ ಕಂಡಿದೆ. ಕಳೆದ ವರ್ಷ ಈ ಅವಧಿಯಲ್ಲಿ 35.445 ಕೋಟಿ ರು.ಗಳಷ್ಟಿದ್ದ ಆದಾಯ ಈ ವರ್ಷ 35, 026 ಕೋಟಿ ರು.ಗೆ ಇಳಿದಿದೆ ಎಂದು ಬ್ಯಾಂಕ್ ಬರೋಡಾ ಫೈಲಿಂಗ್ ವೇಳೆ ನಮೂದಿಸಿದೆ.

ಈ ನಡುವೆ ಬ್ಯಾಂಕ್ ಆಫ್ ಬರೋಡಾದ ಬಡ್ಡಿ ಆದಾಯ ಕೊಂಚ ಸುಧಾರಿಸಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 30, 278 ಕೋಟಿ ರು.ಗಳಷ್ಟಿದ್ದ ಆದಾಯ ಈ ವರ್ಷ 31, 511 ಕೋಟಿ ರು.ಗೆ ತಲುಪಿದೆ. ನಿವ್ವಳ ಬಡ್ಡಿ ಆದಾಯ ಕಳೆದ ವರ್ಷವಿದ್ದ 11,637 ಕೋಟಿ ರು.ಗಿಂತ ಅಲ್ಪ ಏರಿಕೆಯಾಗಿ 11, 954 ಕೋಟಿ ರು.ಗೆ ತಲುಪಿದೆ. ಇನ್ನು ಕಾರ್ಯಾಚರಣೆ ಲಾಭವು ಕಳೆದ ವರ್ಷ 9, 477 ಕೋಟಿ ರು.ಗಳಷ್ಟಿತ್ತು. ಈ ವರ್ಷ ಅದು 7576 ಕೋಟಿ ರು.

ಬ್ಯಾಂಕ್ ಆಫ್ ಬರೋಡಾದ ಮಾಹಿತಿಯ ಪ್ರಕಾರ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ ಶೇ.2.16ಕ್ಕೆ ಇಳಿದಿದೆ. ಕಳೆದ ವರ್ಷ ಶೇ.2.50ರಷ್ಟಿತ್ತು. ನಿವ್ವಳ ಎನ್‌ಪಿಗಳು ಕುಸಿದಿದ್ದು ಕಳೆದ ಸೆಪ್ಟೆಂಬರ್ ಅಂತ್ಯದಲ್ಲಿ 0.6ರಷ್ಟಿತ್ತು. ಈ ವರ್ಷ 0.3ರಷ್ಟು ಕುಸಿದು 0.57ಕ್ಕೆ ತಲುಪಿದೆ.
ಇನ್ನು ಅನುಶ್ಚಿತತೆ ಮೊತ್ತವು 2024ರ ಸೆಪ್ಟೆಂಬರ್‌ನಲ್ಲಿ 2336 ಕೋಟಿ ರುಗಳಷ್ಟಿತ್ತು. ಈ ವರ್ಷ 1232 ಕೋಟಿ ರು.ಗೆ ಇಳಿದಿದೆ. ಇನ್ನು ತ್ರೈಮಾಸಿಕದಲ್ಲಿ ಪಿಸಿಆರ್ 93.21ಕ್ಕೆ ಇಳಿದಿದೆ. ಕಳೆದ ವರ್ಷ 93.61ರಷ್ಟಿತ್ತು. ಇನ್ನು ಸಿಆರ್‌ಎಆರ್ ಶೇ.16.26 ರಿಂದ 16.54ಕ್ಕೆ ಏರಿಕೆ ಆಗಿದೆ ಎಂದು ಬ್ಯಾಂಕ್ ಹೇಳಿದೆ.