ಪ್ರತಿಷ್ಠೆಯ ಕಣವಾದ ಪತ್ರಕರ್ತರ ಚುನಾವಣೆ: ಜಿಲ್ಲೆಯಿಂದ 34 ಮಂದಿ ಅಭ್ಯರ್ಥಿಗಳು ಕಣಕ್ಕೆ: ಇಬ್ಬರು ಅವಿರೋಧ ಆಯ್ಕೆ

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣೆ ನ.9ರಂದು ನಡೆಯಲಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. 23 ಸ್ಥಾನಗಳಿಗೆ ಒಟ್ಟು 34 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ನಾಮಪತ್ರ ಹಿಂಪಡೆಯುವ ದಿನಾಂಕ ಕೊನೆಗೊಂಡ ಹಿನ್ನಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾಗಿದೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೇಶ್ ಕೆ.ಪೂಜಾರಿ, ಕೋಶಾಧಿಕಾರಿ ಸ್ಥಾನಕ್ಕೆ ವಿಜಯ್ ಕೋಟ್ಯಾನ್ ಪಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ:


ಅಧ್ಯಕ್ಷ ಸ್ಥಾನಕ್ಕೆ ನೇರ ಸ್ಪರ್ಧೆ ಏರ್ಪಟ್ಟಿದ್ದು ಪುಷ್ಪರಾಜ್ ಬಿ.ಎನ್ ಹಾಗೂ ಶ್ರವಣ್ ಕುಮಾರ್ ಕೆ. ಕಣದಲ್ಲಿದ್ದಾರೆ.

ಉಪಾಧ್ಯಕ್ಷ ಸ್ಥಾನ:


ಉಪಾಧ್ಯಕ್ಷ 3 ಸ್ಥಾನಗಳಿಗೆ 5 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ರಾಜೇಶ್ ಶೆಟ್ಟಿ , ಮಹಮ್ಮದ್ ಆರೀಫ್, ಗಂಗಾಧರ ಕಲ್ಲಪಳ್ಳಿ, ಐ.ಬಿ. ಸಂದೀಪ್ ಕುಮಾರ್
ವಿಲ್‌ಫ್ರೆಡ್ ಡಿಸೋಜಾ ಕಣದಲ್ಲಿದ್ದಾರೆ.

ಕಾರ್ಯದರ್ಶಿ ಸ್ಥಾನ:
ಕಾರ್ಯದರ್ಶಿ 3 ಸ್ಥಾನಗಳಿಗೆ 4 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಎ. ಸಿದ್ದಿಕ್ ನೀರಾಜೆ, ರಾಜೇಶ್ ಕುಮಾರ್, ಸುರೇಶ್ ಡಿ ಪಳ್ಳಿ, ಸತೀಶ್ ಇರಾ ಸ್ಪರ್ಧಿಸುತ್ತಿದ್ದಾರೆ.

ರಾಜ್ಯ ಕಾರ್ಯಕಾರಿಣಿ ಸಮಿತಿ:


ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯತ್ವಕ್ಕೆ ಇಬ್ಬರು ಕಣದಲ್ಲಿದ್ದಾರೆ. ಮುಹಮ್ಮದ್ ಅನ್ಸಾರ್ ಇನೋಳಿ ಹಾಗೂ ಹಾಲಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಕಣದಲ್ಲಿದ್ದಾರೆ.

ಜಿಲ್ಲಾ ಕಾರ್ಯಕಾರಿಣಿ ಸಮಿತಿ:


ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರ 15 ಸ್ಥಾನಗಳಿಗೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗಿರೀಶ್ ಅಡ್ಪಂಗಾಯ, ಆರೀಫ್ ಕಲ್ಕಟ್ಟ, ಪ್ರಕಾಶ್ ಸುವರ್ಣ, ಸಂದೀಪ್ ಕುಮಾರ್ ಎಂ. ಲಕ್ಷ್ಮಿನಾರಾಯಣ ರಾವ್, ಹರೀಶ್ ಮೋಟುಕಾನ, ಶಶಿಧರ ಬಂಗೇರ, ದಿವಾಕರ ಪದ್ಮುಂಜ, ಕಿರಣ್ ಯು. ಸಿರ್ಸೀಕರ್, ಅಭಿಷೇಕ್ ಎಚ್.ಎಸ್, ಜಯಶ್ರೀ, ಮಂಜುನಾಥ್ ಕೆ.ಪಿ., ಭುವನೇಶ್ವರ ಜಿ. ಸಂದೀಪ್ ವಾಗ್ಲೆ, ಪ್ರವೀಣ್ ರಾಜ್ ಕೆ.ಎಸ್, ಹರೀಶ್ ಕೆ. ಆದೂರ್, ಲೋಕೇಶ್ ಸುರತ್ಕಲ್, ಶೇಕ್ ಜೈನುದ್ದೀನ್, ಸಂದೀಪ್ ಸಾಲ್ಯಾನ್, ಅಶೋಕ್ ಶೆಟ್ಟಿ ಬಿ.ಎನ್, ಸಂದೇಶ್ ಜಾರ, ಕಣದಲ್ಲಿದ್ದಾರೆ.

ಚುನಾವಣೆಯ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣಾಧಿಕಾರಿ, ವಾರ್ತಾಧಿಕಾರಿ ಖಾದರ್ ಷಾ ತಿಳಿಸಿದ್ದಾರೆ.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!