ಸ್ಪೀಕರ್ ವಿರುದ್ಧದ ಆರೋಪ ಖಂಡನೀಯ : AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಮಂಗಳೂರು: ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ವಿರುದ್ಧ ಶಾಸಕ ಭರತ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ಅಖಿಲ ಭಾರತೀಯ ಕ್ರೈಸ್ತ ಒಕ್ಕೂಟ ಇದರ ಕರ್ನಾಟಕ ರಾಜ್ಯಾಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.

ಅವರು ನೀಡಿದ ಹೇಳಿಕೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ನಿಷ್ಕಳಂಕ ಹಾಗೂ ಜನಪರ ನಾಯಕರಲ್ಲಿ ಒಬ್ಬರಾಗಿರುವ ಯು.ಟಿ. ಖಾದರ್ ಎಂದಿಗೂ ಲಂಚ ಸ್ವೀಕರಿಸಿದವರಲ್ಲ. ಭರತ್ ಶೆಟ್ಟಿಯವರು ಮಾಡಿದ ಆರೋಪಗಳು ಅಸತ್ಯ ಹಾಗೂ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಎಂದು ಅವರು ಆರೋಪಿಸಿದರು. ಖಾದರ್ ಅವರ ವಿರುದ್ಧದ ಅಪವಾದವನ್ನು ಖಂಡಿಸುತ್ತಾ, ರಾಜಕೀಯ ಲಾಭಕ್ಕಾಗಿ ವ್ಯಕ್ತಿತ್ವ ಹಾನಿಗೆ ಯತ್ನಿಸುವಂತ ಹೇಳಿಕೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಲ್ವಿನ್ ಡಿಸೋಜರವರು ಒತ್ತಾಯಿಸಿದ್ದಾರೆ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಕರ್ನಾಟಕ ರಾಜ್ಯದ ರಾಜಕೀಯ ವಲಯದಲ್ಲಿ ಸ್ಪೀಕರ್ ಯು.ಟಿ. ಖಾದರ್ ರವರ ನಿಷ್ಠೆ ಮತ್ತು ಪ್ರಾಮಾಣಿಕತೆ ಕುರಿತು ಪ್ರಶಂಸೆಯ ಧ್ವನಿ ಕೇಳಿಬರುತ್ತಿದೆ. ಖಾದರ್ ಅವರು ಯಾವತ್ತೂ ಭ್ರಷ್ಟಾಚಾರ ಮಾಡಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಅವರನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ನೇಮಿಸಿದೆ. ಪಕ್ಷದ ಮೂಲಗಳು ಖಾದರ್ ರವರ ಸುದೀರ್ಘ ರಾಜಕೀಯ ಬದುಕು ನಿಷ್ಠೆಯ ಮಾದರಿಯಾಗಿದೆ ಎಂದು ತಿಳಿಸಿವೆ. ಅವರು ಸದಾ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ಹಾಗೂ ವಿಧಾನಸಭೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಸ್ಪೀಕರ್ ಖಾದರ್ ರವರು ಯಾವಾಗಲೂ ಸರ್ವರ ಸಮಬಾಳು ಶಾಂತಿಯ ವಾತಾವರಣವನ್ನು ಬಯಸುವವರು. ಅವರು ಧರ್ಮ, ಜಾತಿ ಅಥವಾ ಪಕ್ಷಭೇದದ ರಾಜಕೀಯದಿಂದ ದೂರವಿದ್ದು, ಎಲ್ಲರಿಗೂ ಸಮಾನ ಅವಕಾಶ ನೀಡುವ ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ. ವಿಧಾನಸಭೆಯ ಅಧಿವೇಶನಗಳಲ್ಲಿಯೂ ಅವರು ಎಲ್ಲಾ ಸದಸ್ಯರಿಗೆ ಗೌರವ ನೀಡುತ್ತಾ, ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೋತ್ಸಾಹಿಸುತ್ತಾರೆ. ಅವರ ಶಾಂತ, ಸಮತೋಲನದ ನಡವಳಿಕೆ ಮತ್ತು ಎಲ್ಲರನ್ನು ಒಳಗೊಳ್ಳುವ ಮನೋಭಾವವು ರಾಜ್ಯ ರಾಜಕೀಯದಲ್ಲಿ ಸೌಹಾರ್ದತೆ ಹಾಗೂ ಸಹಕಾರದ ವಾತಾವರಣವನ್ನು ನಿರ್ಮಿಸಲು ನೆರವಾಗಿದೆ ಎಂದು ಆಲ್ವಿನ್ ತಿಳಿಸಿದ್ದಾರೆ.

ಈ ಸಮಯದಲ್ಲಿ ಸ್ಪೀಕರ್ ಯು.ಟಿ. ಖಾದರ್ ರವರ ನಿಷ್ಠೆ ಮತ್ತು ಪಕ್ಷನಿಷ್ಠೆಯೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಒಂದು ವೇಳೆ ಖಾದರ್ ರವರು ಭ್ರಷ್ಟರಾಗಿದ್ದರೆ, ಇಂತಹ ಕಠಿಣ ಕ್ರಮಗಳನ್ನು ಅವರು ವಿರೋಧಿಸುತ್ತಿದ್ದರು. ಆದರೆ ಖಾದರ್ ರವರು ಯಾವುದೇ ವಿರೋಧ ವ್ಯಕ್ತಪಡಿಸದೆ, ಸರ್ಕಾರದ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಅವರ ಈ ನಿಷ್ಠಾವಂತ ನಿಲುವು ಮತ್ತು ಶಾಂತಿ ಸ್ಥಾಪನೆಗೆ ನೀಡಿದ ಸಹಕಾರದಿಂದ ಅವರು ಪ್ರಾಮಾಣಿಕ ಮತ್ತು ಜನಹಿತ ಚಿಂತನೆಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಆಲ್ವಿನ್ ಡಿಸೋಜ ಪಾನೀರ್ ಸ್ಪಷ್ಟಪಡಿಸಿದ್ದಾರೆ.

error: Content is protected !!