ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಇಂದು ಸಂಜೆ ನಡೆದ ನಟ ವಿಜಯ್ ದಳಪತಿ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿತಕ್ಕೆ 33ಕ್ಕೂ ಹೆಚ್ಚು ಮಂದಿ ದಾರುಣ ಬಲಿಯಾಗಿದ್ದಾರೆ.
ಮೃತರಲ್ಲಿ ಮೂವರು ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರು ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬೆಂಬಲಿಗರಾಗಿದ್ದರು. ರ‍್ಯಾಲಿಗಾಗಿ ಕನಿಷ್ಠ ಆರು ಗಂಟೆಗಳ ಕಾಲ ಕಾದಿದ್ದರು. ಸ್ಥಳಕ್ಕೆ ರ‍್ಯಾಲಿ ತಡವಾಗಿ ಬಂದಿತು. ಹೀಗಾಗಿ, ಹೆಚ್ಚಿನ ಜನಸಂದಣಿಯಾಗಿ ಕಾಲ್ತುಳಿತ ಸಂಭವಿಸಿದೆ.