ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಕ್ಷೇತ್ರ ಸಸಿಹಿತ್ಲು ಭಗವತಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ 500000 ಅನುದಾನ ಬಿಡುಗಡೆಯಾಗಿದ್ದು . ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ ) ಜಿಲ್ಲಾ ನಿರ್ದೇಶಕರು ಶ್ರೀ ದಿನೇಶ್ ಸಮಿತಿಗೆ ಹಸ್ತಾಂತರ ಮಾಡಿದರು.

ಬ್ರಹ್ಮಕಲೋತ್ಸವ ಸಮಿತಿಯ ಅಧ್ಯಕ್ಷರಾದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯೋಜನಾಧಿಕಾರಿ ಗಿರೀಶ್ ಎಂ, ಅರಸು ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರು ಗೌತಮ್ ಜೈನ್, ಮುಲ್ಕಿ ವಲಯ ಅಧ್ಯಕ್ಷರು ಪುಷ್ಪರಾಜ್ ಶೆಟ್ಟಿ, ಮುಲ್ಕಿ ಜನಜಾಗೃತಿ ವೇದಿಕೆ ಅಧ್ಯಕ್ಷರು ವಿನೋದ್ ಬೆಳ್ಳಾಯಾರು, ಸಸಿಹಿತ್ಲು ಒಕ್ಕೂಟದ ಅಧ್ಯಕ್ಷರು ಶ್ರೀಮತಿ ಶೈಲಜಾ, ಸಸಿಹಿತ್ಲು ದೇವಸ್ಥಾನದ ಅನುವಂಶಿಕ ಮುಕ್ತೇಸರರು ಪ್ರದಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಆಡಳಿತ ಮೊಕ್ತೇಸರರಾದ ಶ್ರೀ ಚಂದ್ರಶೇಖರ ಬೆಳ್ಚ್ ಡ ಗಂಪ ಮನೆ ಕಟೀಲು, ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ, ಮಾತೃ ಮಂಡಳಿ ಅಧ್ಯಕ್ಷೆ ಕಸ್ತೂರಿ ಪಂಜ,. ಸಂಚಾಲಕಿ ಶ್ರೀಮತಿ ಗೀತಾ ಪಿ ಕುಮಾರ್, ಮೊಗವೀರ ಮಹಿಳಾ ಸಭಾ ಅಧ್ಯಕ್ಷರು ಶ್ರೀಮತಿ ಸವಿತ, ಮೊಗವೀರ ಮಹಾಸಭಾ ಉಪಾಧ್ಯಕ್ಷರು ಶ್ರೀ ಶೋಭೇಂದ್ರ ಸಸಿಹಿತ್ಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮೂಲ್ಕಿ ವಲಯದ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
