ಮಂಗಳೂರು : ಶನಿವಾರ ಮಧ್ಯಾಹ್ನ ಬೆಳಕಿಗೆ ಬಂದ AKMS ಬಸ್ ಮಾಲಕ ಸೈಫುದ್ದಿನ್ ಬರ್ಬರ ಹತ್ಯೆಯನ್ನು ಆತನ ಜೊತೆ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆತನ ಸಹಚರರೇ ಮಾಡಿರುವುದು ಬೆಳಕಿಗೆ ಬಂದಿದ್ದು ಮೂವರಲ್ಲಿ ಇಬ್ಬರು ಪೊಲೀಸರಿಗೆ ಶರಣಾಗಿರುವ ಮಾಹಿತಿ ಲಭಿಸಿದೆ. ಮೂವರು ಆರೋಪಿಗಳು ಕೂಡ ಅದೇ ಬಸ್ಸಿನ ಚಾಲಕಾರಾಗಿದ್ದಾರೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಮಣಿಪಾಲದಿಂದ ಸೈಫ್ ಕಾರಲ್ಲಿ ಕೊಡವೂರಿನ ಆತನ ಮನೆಗೆ ಹೋಗಿದ್ದ ಮೂವರು ಸಹಚರರು ಸೈಫುದ್ದೀನ್ ಮನೆಯ ಬಾಗಿಲು ತೆಗೆದು ಒಳಗೆ ಕಾಲಿಡುತ್ತಿದ್ದಂತೆ ಹಿಂದಿನಿಂದ ಚೂರಿ ಹಾಗೂ ತಲವಾರಿನಿಂದ ಇರಿದು ಕೊಲೆಗೈದು ಎಸ್ಕೇಪ್ ಆಗಿದ್ದಾರೆ.
ಆರೋಪಿಗಳನ್ನು ಡಯಾನ ಕುಕ್ಕಿಕಟ್ಟೆಯ ಫೈಜಲ್ ಖಾನ್, ಕಂಬಳ್ಳಿಯ ಜನತಾ ಕಾಲೋನಿಯ ಮೊಹಮ್ಮದ್ ಶರೀಫ್ ಮತ್ತು ಸುರತ್ಕಲ್ ಚೊಕ್ಕಬೆಟ್ಟಿನ ಶುಕ್ರು ಯಾನೆ ಅದ್ದು ಎಂದು ಹೆಸರಿಸಲಾಗಿದೆ. ಇವರಲ್ಲಿ ಶುಕೂರ್ ಮತ್ತು ಷರೀಫ್ 2020ರಲ್ಲಿ ಹಿರಿಯಡ್ಕ ಬಳಿ ನಡೆದಿದ್ದ ನ್ಯೂ ಮುಂಬೈ ನಿವಾಸಿ ವಶಿಷ್ಠ ಯಾದವ್ ಹತ್ಯೆಯಲ್ಲಿ ಸೈಫು ಜೊತೆ ಪಾಲ್ಗೊಂಡವರಾಗಿದ್ದಾರೆ.
ಅಬ್ದುಲ್ ಶುಕೂರು ಮತ್ತು ಶರೀಫ್ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಗೆ ಬೇರೆ ಯಾರಾದರೂ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.