“ಸಿಂಹವಾಹಿನಿ” ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ಇದರ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಲಯನ್ಸ್ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಸಿಂಹವಾಹಿನಿ’ ಇತ್ತೀಚೆಗೆ ಆಯೋಜಿಸಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅರವಿಂದ್ ಶೆಣೈ ಅವರು ಮಾತನಾಡಿ, ರಾಜೇಶ್ ಶೆಟ್ಟಿ ಶಬರಿ ಅವರ ದಕ್ಷ ನೇತೃತ್ವದ ಸಂಘಟನಾ ಸಮಿತಿಯ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಆಶೀರ್ವಚನ ನೀಡಿದ ಕಟೀಲು ದೇವಳದ ಅನುವಂಶಿಕ ಪ್ರಧಾನ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು ಮಾತನಾಡಿ, ಎಲ್ಲ ಜೀವಿಗಳಿಗಿಂತ ಮನುಷ್ಯ ಜನ್ಮ ಅತ್ಯಂತ ಶ್ರೇಷ್ಟವಾಗಿದೆ. ಪರೋಪಕಾರ ಮನುಷ್ಯರ ಜೀವನ ಧರ್ಮವಾಗಬೇಕು. ಈ ನಿಟ್ಟಿನಲ್ಲಿ ವೈವಿಧ್ಯಮಯ ಸಮಾಜ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್ ಕ್ಲಬ್ ಸದಸ್ಯರು ಅಭಿನಂದನಾರ್ಹರು ಎಂದರು.

ಹಿರಿಯ ಲಯನ್ಸ್ ಸದಸ್ಯ ಸದಾಶಿವ ಕಿಣಿ ಅವರು ನಗಾರಿ ಬಾರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಮಮತಾ ಅರವಿಂದ್ ಶೆಣೈ, ರಮ್ಯಾ ರಾಜೇಶ್ ಶೆಟ್ಟಿ, ಸ್ಪರ್ಧೆಯ ಸಂಚಾಲಕ ಹರೀಶ್ ಕೆ.ಪೂಜಾರಿ ಹಾಗೂ ಸಂಘಟನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಿಂಹವಾಹಿನಿ ಸ್ಪರ್ಧೆಯ ಪ್ರಧಾನ ಸಂಚಾಲಕ ಕೆ.ರಾಜೇಶ್ ಶೆಟ್ಟಿ ಶಬರಿ ಸ್ವಾಗತಿಸಿ, ವಿನುತಾ ಕೆ. ವಂದಿಸಿದರು. ಮನೋಜ್ ಶೆಟ್ಟಿ ನಿರೂಪಿಸಿದರು. ಎರಡು ವಿಭಾಗಗಳಲ್ಲಿ ಒಟ್ಟು 15 ಲಯನ್ಸ್ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.

error: Content is protected !!